ಬೆಂಗಳೂರು,ಜೂ 19 (DaijiworldNews/MS): ಮಳೆ ಕೊರತೆ ಹಿನ್ನೆಲೆ ರಾಜ್ಯದಲ್ಲಿ ಮೋಡ ಬಿತ್ತನೆ ಮಾಡುವ ಬಗ್ಗೆ ಸರ್ಕಾರ ಸದ್ಯ ಯಾವುದೇ ಚಿಂತನೆ ಮಾಡಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಳೆ ಕೊರತೆ ಆಗಲ್ಲ ಎಂಬ ವರದಿಯಿದೆ. ಮುಗಾರು ತಡವಾಗಿ ಪ್ರವೇಶ ಆಗಿದೆ. ಚಂಡಮಾರುತ ಪರಿಣಾಮ ತೇವಾಂಶ ಕೊರತೆಯಿಂದ ಪರಿಣಾಮ ಆಗಿದೆ ಎಂದಿದ್ದಾರ್ಎ
ತಜ್ಞರ ವರದಿ ಪ್ರಕಾರ ಶೇ.96ರಿಂದ ಶೇ.104ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಜೂನ್ ತಿಂಗಳಲ್ಲಿ ಎಲ್ಲ ಜಿಲ್ಲೆಗಳಲ್ಲಿ ಸ್ವಲ್ಪ ಮಳೆ ಸಮಸ್ಯೆಯಾಗಬಹುದು. ಆದರೆ ಜುಲೈನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಮಳೆ ಕೊರತೆ ಆಗಲ್ಲ ಎಂಬ ವರದಿ ಇದ್ದರೂ ಮಳೆ ಕೊರತೆ ಬಗ್ಗೆ ಸರ್ಕಾರ ನಿಗಾ ವಹಿಸುತ್ತಿವೆ. ಕೆಲವು ಜಿಲ್ಲೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.