ಬೆಂಗಳೂರು, ಜೂ 18 (DaijworldNews/HR): ಮಹಿಳೆಯರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್ಗಳಲ್ಲಿ ನೂಕುನುಗ್ಗಾಟ ಹೆಚಾಗಿದ್ದು, ಈ ನಿಟ್ಟಿನಲ್ಲಿ ವೀಕೆಂಡ್ಸ್ ರೂಲ್ಸ್ ಜಾರಿಗೊಳಿಸಲು ಸರ್ಕರ ಚಿಂತನೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ಮಹಿಳೆಯರು ವಾರಾಂತ್ಯಗಳಲ್ಲಿ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗುವುದರಿಂದ ಭಾರಿ ನೂಕುನುಗ್ಗಲು ಉಂಟಾಗುತ್ತಿದ್ದು, ಬಸ್ಗಳಲ್ಲಿ ಬೇರೆಯವರಿಗೆ ಸಂಚರಿಸಲೇ ಸಾಧ್ಯವಿಲ್ಲದಷ್ಟು ಒತ್ತಡ ಉಂಟಾಗುತ್ತಿದೆ.
ಇನ್ನು ಶಕ್ತಿ ಯೋಜನೆಯ ಆರಂಭದಿಂದಲೂ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದು, ವಾರಾಂತ್ಯಗಳಲ್ಲಿ ಮಹಿಳೆಯರು ಗುಂಪಾಗಿ ದೇವಸ್ಥಾನಗಳಿಗೆ ಹೋಗುತ್ತಿರುವುದರಿಂದ ಒತ್ತಡ ಹೆಚ್ಚಾಗುತ್ತಿದೆ. ಹೀಗಾಗಿ ಎಲ್ಲರೂ ಒಂದೇ ಸಲ ಹೋಗಬೇಡಿ, ಅವಸರ ಮಾಡಬೇಡಿ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದ ಐದು ವರ್ಷ ಕಾಲ ಇರುತ್ತದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ. ಆಮೇಲೆ ಮತ್ತೆ ಚುನಾವಣೆ ನಡೆದ ಬಳಿಕ ಇನ್ನೂ 10 ವರ್ಷ ಇರುತ್ತದೆ ಎಂದು ಹೇಳಿದ್ದಾರೆ.
ಕೆಎಸ್ಆರ್ಟಿಸಿ ಬಸ್ಸಲ್ಲಿ ಪುರುಷರಿಗೆ ಮೀಸಲಿಟ್ಟ ಆಸನಗಳನ್ನ ನಿರ್ವಾಹಕರು ಪುರುಷರಿಗೆ ಸಿಗುವಂತೆ ಮೇಲ್ವಿಚಾರಣೆ ನೀಡೋ ಸಾಧ್ಯತೆ. ವೀಕೆಂಡ್ ನಲ್ಲಿ ಬಸ್ ಗಳ ಸಂಖ್ಯೆ ಹೆಚ್ಚಿಸುವ ಸಾಧ್ಯತೆ. ನಿಲ್ದಾಣಗಳಲ್ಲಿ ಸರತಿ ಸಾಲಿನಲ್ಲಿ ಬಸ್ ಹತ್ತುವ ವ್ಯವಸ್ಥೆ ಮಾಡೋ ಸಾಧ್ಯತೆ. ವೀಕೆಂಡ್ ನಲ್ಲಿ ನಿಲ್ದಾಣಗಳಲ್ಲಿ ಪೊಲೀಸರ ನಿಯೋಜನೆ. ಬಸ್ ಗಳಲ್ಲಿ ಪ್ರಯಾಣಿಕರ ಮಿತಿ ಹೇರುವ ಸಾಧ್ಯತೆ. ದೂರ ಪ್ರಯಾಣಕ್ಕೆ ಮೊದಲೇ ಟಿಕೆಟ್ ಬುಕ್ ಮಾಡಬೇಕೆಂದು ಸೂಚಿಸುವ ಸಾಧ್ಯತೆ ಎನ್ನಲಾಗಿದೆ.