ಬೆಂಗಳೂರು, ಜೂ 20 (DaijiworldNews/MS): ಇಂದಿರಾ ಕ್ಯಾಂಟೀನ್ ಪುನಶ್ಚೇತನಕ್ಕೆ ಆದ್ಯತೆ ನೀಡಿ ಹೊಸ ರೂಪದಲ್ಲಿ ಜನರಿಗೆ ಪರಿಚಯಿಸಲು ರಾಜ್ಯ ಸರ್ಕಾರ ಒತ್ತು ನೀಡುತ್ತಿದ್ದು ಇದರ ಪರಿಣಾಮ ಈಗಾಗಲೇ ಇಂದಿರಾ ಕ್ಯಾಂಟೀನ್ಮೆನು ಮತ್ತು ದರದಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ. ಮಾತ್ರವಲ್ಲ ಗುಣಮಟ್ಟದ ಜೊತೆಗೆ ಶುಚಿ-ರುಚಿ ಊಟ ನೀಡಲು ಒತ್ತು ನೀಡಲಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಹೊಸ ಬಗೆಯ ಆಹಾರ ಸೇರ್ಪಡೆ ಮಾಡಲು ತೀರ್ಮಾನಿಸಲಾಗಿದೆ. ಬೆಳಗ್ಗೆ ತಿಂಡಿ ಮೆನುಗೆ ಬ್ರೆಡ್ ಜಾಮ್ ಮತ್ತು ಮಂಗಳೂರು ಬನ್ಸ್ ಸೇರ್ಪಡೆಯಾಗಲಿದೆ. ಇಡ್ಲಿ ಚಟ್ನಿ/ ಸಾಂಬಾರ್, ಬ್ರೆಡ್ ಜಾಮ್, ಮಂಗಳೂರು ಬನ್ಸ್, ಬೇಕರಿ ಬನ್, ಪುಲಾವ್, ಟೊಮ್ಯಾಟೊ ಬಾತ್, ಖಾರಾ ಪೊಂಗಲ್, ಬಿಸಿಬೇಳೆ ಬಾತ್, ಅನ್ನ ಸಾಂಬಾರ್, ರಾಗಿ ಮುದ್ದೆ ಸೊಪ್ಪುಸಾರು, ಚಪಾತಿ ಮತ್ತು ಪಲ್ಯ, ಟೀ ಕಾಫಿ ಜೊತೆಗೆ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ ಊಟಕ್ಕೆ ಸಿಗಲಿದೆ ಒಂದು ಸಿಹಿ ಪಾಯಸ ಅಥವಾ ಸಿಹಿ ತಿಂಡಿ ನೀಡಲು ಚಿಂತನೆ ನಡೆಸಲಾಗಿದೆ.
ಊಟ ಒದಗಿಸುವ ಏಜೆನ್ಸಿಗಳು ಫೈನಲ್ ಆಗುತ್ತಿದ್ದಂತೆ ಹೊಸ ಮೆನು ಜಾರಿಗೆ ಬರಲಿದೆ. ಬೆಳಗಿನ ತಿಂಡಿ 5 ರೂಪಾಯಿ ಇತ್ತು 10 ರೂಗೆ ಏರಿಕೆ ಆಗಲಿದೆ. ಮಧ್ಯಾಹ್ನ ಊಟಕ್ಕೆ 10 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.