ಥಾಣೆ,ಜೂ 21 (DaijiworldNews/MS): ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳಾ ಶಾಸಕಿಯೊಬ್ಬರು ಸಿವಿಲ್ ಎಂಜಿನಿಯರ್ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಮೀರಾ ಭಯಂದರ್ನ ಶಾಸಕಿ ಗೀತಾ ಜೈನ್ ಕೆಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ವಿಚಾರವಾಗಿ ಮುನ್ಸಿಪಲ್ ಕಾರ್ಪೊರೇಷನ್ನ ಇಬ್ಬರು ಇಂಜಿನಿಯರ್ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಟ್ಟಡಗಳನ್ನು ನೆಲಸಮಗೊಳಿಸುವ ಎಂಜಿನಿಯರ್ಗಳ ಕ್ರಮದಿಂದಾಗಿ ಮಕ್ಕಳು ಸೇರಿದಂತೆ ನಿವಾಸಿಗಳು ಮಳೆಗಾಲಕ್ಕೂ ಮುನ್ನವೇ ಬೀದಿಪಾಲಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗೀತಾ ಜೈನ್ ದೂರು ಸ್ವೀಕರಿಸಿದ್ದರು.
ಈ ವೇಳೆ ಸಿಟ್ಟಾದ ಗೀತಾ ಜೈನ್ ಒಬ್ಬ ಎಂಜಿನಿಯರ್ನ ಕಾಲರ್ ಹಿಡಿದುಕೊಂಡು ಕೆನ್ನೆಗೆ ಬಾರಿಸಿದ್ದಾರೆ. ಶಾಸಕಿ ವರ್ತನೆಗೆ ಭಾರೀ ವಿರೋಧ ವ್ಯಕ್ತವಾಗಿದೆ.
ಬಿಜೆಪಿಯ ಮಾಜಿ ಮೇಯರ್ ಆಗಿದ್ದ ಎಂಎಸ್ ಜೈನ್ 2019 ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಪ್ರಸ್ತುತಬಿಜೆಪಿ-ಶಿವಸೇನೆ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.