ನವದೆಹಲಿ,ಏ01(AZM):ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆ 5 ರೂಪಾಯಿ ಏರಿಕೆ ಕಂಡಿದೆ.
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಏರಿಕೆ ಕಂಡಿದೆ. ಸಬ್ಸಿಡಿ ರಹಿತ ಸಿಲಿಂಡರ್ ಗಳ ಬೆಲೆಯಲ್ಲಿ ಐದು ರೂ. ಏರಿಕೆ ಕಂಡಿರುವ ಪರಿಣಾಮ ಈಗ 14.2 ಕೆ.ಜಿ. ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 706.50 ರೂ. ತಲುಪಿದೆ.
ಅದೇ ರೀತಿ ವಾಣಿಜ್ಯ ನಗರಿ ಮುಂಬೈನಲ್ಲಿ ಈ ಸಿಲಿಂಡರ್ ಬೆಲೆ 678.50 ರೂ. ಗಳಾಗಿದ್ದರೆ, ಚೆನ್ನೈನಲ್ಲಿ 722 ಹಾಗೂ ಕೋಲ್ಕತ್ತಾದಲ್ಲಿ 732.50 ರೂಪಾಯಿ ತಲುಪಿದೆ.