ಕೊಪ್ಪಳ, ಜೂ 22 (DaijiworldNews/HR): ಕೊಪ್ಪಳದಲ್ಲಿ ವೃದ್ಧೆಯೊಬ್ಬರ 2 ಬಲ್ಬ್ ಇರುವ ತಗಡಿನ ಶೆಡ್ನ ಮನೆಗೆ ಜೆಸ್ಕಾಂ ಸಿಬ್ಬಂದಿ 1 ಲಕ್ಷದ 3 ಸಾವಿರದ 315 ರೂ. ಬಿಲ್ ನೀಡಿದ ಘಟನೆ ನಡೆದಿದೆ.
ಬಿಲ್ ನೋಡಿ ಆತಂಕಕ್ಕೊಳಗಾದ ವ್ರದ್ಧೆ ಹಾಗೂ ಆಕೆಯ ಮಗ ಈ ಮನೆ ಮಾರಿದರೂ ಅಷ್ಟು ಬಿಲ್ ಕಟ್ಟಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ವೃದ್ಧೆ ಗಿರಿಜಮ್ಮ ಎಂಬುವರು ಮನೆಗೆ ಭಾಗ್ಯ ಜ್ಯೋತಿ ಯೋಜನೆಯಲ್ಲಿ ವಿದ್ಯುತ್ ಸಂಪರ್ಕ ಪಡೆದಿದ್ದು, ಮೊದಲು ಪ್ರತಿ ತಿಂಗಳು 70 ರೂ. ನಿಂದ 80 ರೂ. ಬಿಲ್ ಬರುತ್ತಿತ್ತು. ಅದರೆಈಗ ಇದ್ದಕ್ಕಿದ್ದಂತೆ ಇಷ್ಟೆಲ್ಲ ಜಾಸ್ತಿಯಾಗಿದೆ ಎಂದು ವೃದ್ಧೆ ಕಣ್ಣೀರಿಟ್ಟಿದ್ದಾರೆ.
ಭಾಗ್ಯ ಜ್ಯೋತಿ ಯೋಜನೆಯ ಪ್ರಕಾರ 18 ಯೂನಿಟ್ ಸರ್ಕಾರವೇ ಪಾವತಿ ಮಾಡುತ್ತಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆ ಈ ಮನೆಗೆ ಜೆಸ್ಕಾಂ ಸಿಬ್ಬಂದಿ ಮೀಟರ್ ಅಳವಡಿಕೆ ಮಾಡಿದ್ದಾರೆ ಎನ್ನಲಾಗಿದೆ.