ಶ್ರೀರಂಗಪಟ್ಟಣ, ಜೂ 22 (DaijiworldNews/MS): ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಬಡಿದು ತನ್ನಿಬ್ಬರನ್ನು ಮಕ್ಕಳನ್ನು ಕೊಂದು ಹಾಕಿದ ಘಟನೆ ಶ್ರೀರಂಗಪಟ್ಟಣದ ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್ನಲ್ಲಿ ನಡೆದಿದೆ.
ಮರಲಗಾಲ ಗ್ರಾಮದ ಬಳಿಯ ಫಾರ್ಮ್ ಹೌಸ್ನಲ್ಲಿ ವಾಸವಿದ್ದ ಗುಲ್ಬರ್ಗ ಮೂಲದಈ ಕುಟುಂಬ ಸ್ಥಳೀಯ ಆಲೆಮನೆಯಲ್ಲಿ ಕೆಲಸ ಮಾಡುತ್ತಿತ್ತು. ಗಂಡ- ಹೆಂಡತಿ ನಡುವೆ ಜಗಳ ಆರಂಭವಾಗಿದ್ದು ಕಲಹದಿಂದ ಬೇಸತ್ತು ಮೊದಲು ಪತ್ನಿ ಲಕ್ಷ್ಮಿಗೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಸುತ್ತಿಗೆ ಏಟು ಬಿದ್ದ ತಕ್ಷಣ ಲಕ್ಷ್ಮೀ ಕೆಳಗೆ ಬಿದ್ದಿದ್ದಾಳೆ. ಬಳಿಕ ಮಕ್ಕಳಿಗೆ ಅದೇ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಮೃತ ಮಕ್ಕಳನ್ನು ಆದರ್ಶ (4), ಅಮೂಲ್ಯ (2) ಎಂದು ಗುರುತಿಸಲಾಗಿದೆ. . ಪತ್ನಿ ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.
ಇಂದು ಮುಂಜಾನೆ 4 ಗಂಟೆಯ ವೇಳೆ ಘಟನ್ಮೆ ಆರೋಪಿ ಶ್ರೀಕಾಂತ್ (29) ಎಂದು ಪರಾರಿಯಾಗಿದ್ದು, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ತಣಿಕೆ ಕೈಗೆತ್ತಿಗೊಂಡಿದ್ದಾರೆ.