ನವದೆಹಲಿ, ಜೂ 22 (DaijiworldNews/HR): ಭಾರತದ ಅತ್ಯಂತ ಕಿರಿಯ ವಾಣಿಜ್ಯ ಪೈಲಟ್ ಆಗಿ ಸಾಕ್ಷಿ ಕೊಚ್ಚರ್ ಅವರು ಹೊಸ ದಾಖಲೆ ನಿರ್ಮಿಸಿದ್ದಾರೆ.
ಸಾಕ್ಷಿ ಕೊಚ್ಚರ್ ಅವರು 18 ನೇ ವಯಸ್ಸಿನಲ್ಲಿ ಪೂರ್ಣ ಪ್ರಮಾಣದ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಹರಾಗಿದ್ದು, ಹಿಮಾಚಲ ಪ್ರದೇಶದ ಪರ್ವಾನೂ ಎಂಬ ಸಣ್ಣ ಪಟ್ಟಣದ ಅವರು ಅತ್ಯಂತ ಕಿರಿಯ ಭಾರತೀಯ ವಾಣಿಜ್ಯ ಪೈಲಟ್ ಎಂಬ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಇನ್ನು 18 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಂದೇ ವಾಣಿಜ್ಯ ಪೈಲಟ್ ಪರವಾನಗಿ ಪ್ರಮಾಣೀಕರಣವನ್ನು ನೀಡಲಾಗಿದೆ.
ಸಣ್ಣ ಪಟ್ಟಣದಿಂದ ಬಂದ ಸಾಕ್ಷಿ ತರಬೇತಿಗಾಗಿ ಅಮೆರಿಕಕ್ಕೆ 8,500-ಮೈಲಿ ದೂರ ಪ್ರಯಾಣವನ್ನು ಕೈಗೊಂಡಿದ್ದು, ಆರಂಭಿಕ ನಾಲ್ಕು ತಿಂಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಏವಿಯೇಷನ್ ಕ್ಲಬ್ ಯುಎಸ್ ಎ ನಲ್ಲಿರುವ ತರಬೇತಿ ಕೇಂದ್ರದಲ್ಲಿ ಸುಧಾರಿತ ಹಾರಾಟದ ತರಬೇತಿ ಪಡೆದರು.
ವ್ಯಾಪಾರಸ್ಥರ ಕುಟುಂಬದಲ್ಲಿ ಜನಿಸಿದ ಸಾಕ್ಷಿ ಬಾಲ್ಯದಲ್ಲೇ ಪೈಲಟ್ ಆಗಬೇಕೆಂಬ ಮಹದಾಸೆ ಹೊತ್ತಿದ್ದರು ಎನ್ನಲಾಗಿದೆ.