ಕಲಬುರಗಿ, ಜೂ 23 (DaijiworldNews/HR): ಕೇಂದ್ರ ಸರಕಾರವು ಅಕ್ಕಿ ವಿಚಾರದಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ರಾಜ್ಯದ ಜನತೆಯ ವಿಚಾರದಲ್ಲಿ, ಕನ್ನಡಿಗರ ಅಸ್ಮಿತೆ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ಅಕ್ಕಿ ನೀಡುವ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡುತ್ತಿಲ್ಲ. ಎಲ್ಲ ರಾಜ್ಯಗಳಿಗೆ ಕೊಟ್ಟಂತೆ ಕರ್ನಾಟಕಕ್ಕೂ ಕೊಡ್ತಾ ಇದ್ದೇವೆ. ಈಗ ನಾವು ಕೇಳ್ತಾ ಇರೋದು ಕೇಂದ್ರ ಕೊಡುವ 5 ಕೆಜೆ, ಚುನಾವಣೆ ಗ್ಯಾರಂಟಿಯಲ್ಲಿ ಘೋಷಣೆ ಮಾಡಿರುವಂತೆ 10 ಕೆಜಿ ಸೇರಿದಂತೆ ಜನತೆಗೆ ಒಟ್ಟು 15 ಕೆಜಿ ಕೊಡಿ ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ಇನ್ನು ಎಫ್ ಸಿ ಐ ಅಧಿಕಾರಿಗಳ ಬದಲು ಕೇಂದ್ರ ಆಹಾರ ಮಂತ್ರಿಗಳ ಬಳಿಯಲ್ಲಿ ಮನವಿ ಮಾಡಬೇಕಿತ್ತು. ಅದು ಬಿಟ್ಟು ಮಾಧ್ಯಮ ಮುಂದೆ ಹೇಳುಕೊಂಡು ರಾಜ್ಯದಲ್ಲಿ ಪ್ರತಿಭಟನೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಈಗ ಸಿಎಂ ಸಿದ್ಧರಾಮಯ್ಯನವರು ಕೇಂದ್ರ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಸಕಾರಾತ್ಮಕ ವಾಗಿ ಸ್ಪಂದನೆ ಸಿಕ್ಕಿದೆ ಎಂದಿದ್ದಾರಲ್ಲ ಎಂದು ತಿಳಿಸಿದ್ದಾರೆ.