ಬೆಂಗಳೂರು, ಜೂ 23 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರ ಅಮೇರಿಕಾ ಭೇಟಿಯಿಂದ ಐತಿಹಾಸಿಕ ಲಾಭಗಳಾಗಿದ್ದು, ಜೊತೆಗೆ ಕರ್ನಾಟಕ ಮತ್ತು ಬೆಂಗಳೂರಿಗೆ ಅತ್ಯಂತ ಪ್ರಯೋಜನವಾಗಿದೆ ಎಂದು ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
mg src=https://daijiworld.ap-south-1.linodeobjects.com/Linode/img_tv247/hr-230623-soorya.jpg>
ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಯುಎಸ್ ರಾಯಭಾರಿ ಕಚೇರಿ ಬರಬೇಕು ಎಂಬ ಬೇಡಿಕೆ ಇದ್ದರೂ ಯುಪಿಎ ಸರ್ಕಾರ ಇದಕ್ಕೆ ಬೇಕಾದ ಕೆಲಸ ಮಾಡಿರಲಿಲ್ಲ. ಯುಪಿಎ ಅವಧಿಯಲ್ಲಿ ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಆರಂಭವಾದರೂ ಬೆಂಗಳೂರಿನಲ್ಲಿ ಆರಂಭವಾಗಿರಲಿಲ್ಲ. ಆದರೆ ನಾವು ಮೂವರು ಸಂಸದರು ಬೆಂಗಳೂರಿಗೆ ರಾಯಭಾರಿ ಕಚೇರಿ ಬರಬೇಕು ಎಂದು ಮನವಿ ಮಾಡಿದ್ದೆವು ಎಂದರು.
ಇನ್ನು ನನ್ನ ಮೊದಲ ಲೋಕಸಭಾ ಅಧಿವೇಶನದಲ್ಲಿ ಯುಎಸ್ ರಾಯಭಾರಿ ಕಚೇರಿ ಬರಬೇಕು ಎಂದು ಪ್ರಸ್ತಾಪ ಮಾಡಿದ್ದೆ. 2020 ರಲ್ಲಿ ಕೇಂದ್ರ ಸಚಿವ ಜೈಶಂಕರ್ ಅವರನ್ನು ಭೇಟಿ ಮಾಡಿ ಬೆಂಗಳೂರಿನಲ್ಲಿ ಕಚೇರಿ ತೆಗೆಯಬೇಕು ಎಂದು ಮನವಿ ಮಾಡಿದ್ದೆವು ಎಂದಿದ್ದಾರೆ.
ಭಾರತ ಅಮೆರಿಕಾದ ಸಿಯಾಟಲ್ನಲ್ಲಿ ಕಚೇರಿ ತೆರೆಯುವ ಹಂತದಲ್ಲಿದ್ದು, ಆ ಪರಸ್ಪರ ಒಪ್ಪಂದದಡಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದರು. ನಾವು ಅಮೆರಿಕಾದ ರಾಯಭಾರಿಯಾಗಿದ್ದ ಕೆನ್ನೆತ್ ಜಸ್ಟರ್ರವರಿಗೂ ಕೂಡ ಮನವರಿಕೆ ಮಾಡಿಕೊಟ್ಟಿದ್ದೆವು ಎಂದು ತಿಳಿಸಿದ್ದಾರೆ.