ಪಾಟ್ನಾ, ಜೂ 25 (DaijiworldNews/HR): ಬಿಹಾರದ ಅರಾ ಜಿಲ್ಲೆಯಲ್ಲಿ ನಡೆಯುತ್ತಿದ್ದ ಮದುವೆ ವೇದಿಕೆಯ ಮೇಲೆ ನಿಂತಿದ್ದ ಬಾಲಕಿಯೊಬ್ಬಳು ವಿದ್ಯುತ್ ಶಾಕ್ ನಿಂದ ಮೃತಪಟ್ಟಿರುವ ಘಟನೆ ನಡೆದಿದೆ.
6 ವರ್ಷದ ನೈನಾ ಕುಮಾರಿ ಮೃತ ಬಾಲಕಿ.
ಮದುವೆ ಸಮಾರಂಭದಲ್ಲಿ ವಧು ವರರು ಹಾರವನ್ನು ಬದಲಾಯಿಸುವ ಸಲುವಾಗಿ ವೇದಿಕೆಯಿಂದ ಇಳಿದಿದ್ದು, ಈ ವೇಳೆ ನೈನಾ ಕುಮಾರಿ ವೇದಿಕೆಯ ಮೇಲೆ ಹತ್ತಿದ್ದಾಳೆ. ಇದೇ ವೇಳೆ ಆಟವಾಡುತ್ತಿದ್ದ ಬಾಲಕಿಗೆ ವೇದಿಕೆಯ ಮೇಲಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾಳೆ.
ಈ ಘಟನೆ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಬಾಲಕಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದ್ದಾರೆ.