ನಾಗಪುರ, ಜೂ 26 (DaijiworldNews/MS): ದೇಶದಲ್ಲಿ ಶೀಘ್ರದಲ್ಲೇ ಸಂಪೂರ್ಣ ಎಥನಾಲ್ ಇಂಧನದಿಂದ ಸಂಚರಿಸುವ ವಾಹನಗಳು ರಸ್ತೆಗಿಳಿಯಲಿವೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ನಾಗಪುರದಲ್ಲಿ ಮಾತನಾಡಿ, ಸಂಪೂರ್ಣವಾಗಿ 100% ಬಯೋಇಥೆನಾಲ್ನಲ್ಲಿ ಚಲಿಸಬಲ್ಲ ವಾಹನಗಳನ್ನು ಬಜಾಜ್, ಟಿವಿಎಸ್, ಹೀರೋ ಸ್ಕೂಟರ್ ಕಂಪನಿಗಳು ತಯಾರಿಸಲಿವೆ.
ಪ್ರತಿ ಲೀಟರ್ ಎಥನಾಲ್ಗೆ 60ರೂ. ಇದ್ದರೆ ಪೆಟ್ರೋಲ್ಗೆ 100 ರೂ. ಇದೆ. ಅಲ್ಲದೆ ಎಥನಾಲ್ ಶೇ.40ರಷ್ಟು ವಿದ್ಯುತ್ ಉತ್ಪಾದನೆ ಮಾಡುವುದರಿಂದ ಪ್ರತಿ ಲೀಟರ್ನ ಸರಾಸರಿ ಬೆಲೆ 15ರೂ. ಆಗಲಿದೆ ಎಂದು ಗಡ್ಕರಿ ತಿಳಿಸಿದ್ದಾರೆ.