ಬೆಂಗಳೂರು, ಜೂ 26 (DaijiworldNews/MS): ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುತ್ತಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆ ದೇವೇಗೌಡರ ಕುಟುಂಬದಲ್ಲಿ ಮತ್ತೆ ಟಿಕೆಟ್ ಗುದ್ದಾಟ ಶುರುವಾಗುವ ಲಕ್ಷಣ ಕಾಣುತ್ತಿದೆ.
ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ನಿಖಿಲ್ ಸೇರಿದಂತೆ ಕುಟುಂಬದ ಯಾರಿಗೂ ಟಿಕೆಟ್ ಸಿಗೋಲ್ಲ ಎಂದಿರುವುದು ಸಂಚಲನ ಸೃಷ್ಟಿಸಿದೆ.
ಈ ಹೇಳಿಕೆ ಈಗ ರೇವಣ್ಣ ಪುತ್ರ, ಹಾಸನ ಸಂಸದ ಪ್ರಜ್ವಲ್ ಅವರಿಗೆ ಅಸಮಾಧಾನ ತಂದಿದೆ. ಹಾಲಿ ಸಂಸದರಾಗಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೆ, ತಮ್ಮ ಬಳಿ ಚರ್ಚಿಸದೆ ತಮಗೂ ಮುಂದಿನ ಬಾರಿ ಟಿಕೆಟ್ ಇಲ್ಲ ಎಂದು ಪರೋಕ್ಷವಾಗಿ ಎಚ್ಡಿಕೆ ಹೇಳಿರುವುದು ಸರಿಯಲ್ಲ ಎಂದು ಪ್ರಜ್ವಲ್ ಬೇಸರ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಜೆಡಿಎಸ್ಗೆ ಅಂಟಿರುವ ಕುಟುಂಬ ರಾಜಕಾರಣ ಹಣೆಪಟ್ಟಿ ಕಳಚಿಕೊಳ್ಳಲು ಕುಮಾರಸ್ವಾಮಿ ಮುಂದಾದಂತೆ ಕಾಣಿಸುತ್ತಿದೆ.