ಬಳ್ಳಾರಿ, ಜೂ 27 (DaijiworldNews/MS): ವಿದ್ಯುತ್ ಬಳಕೆಯ ವಾರ್ಷಿಕ ಸರಾಸರಿಗೆ ಶೇ.೧೦ರಷ್ಟು ಸೇರಿಸಿ ಮುಂದಿನ ಆಗಸ್ಟ್ ತಿಂಗಳಿನಿಂದ ಶೂನ್ಯ ಬಿಲ್ ನೀಡಲಾಗುವುದು ಎಂದು ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿ, ಜುಲೈ ನಂತರ ಗೃಹಜ್ಯೋತಿ ಯೋಜನೆ ಅನುಷ್ಠಾನಕ್ಕೆ ತರಲಾಗುವುದು. ರಾಜ್ಯದಲ್ಲಿ 2 ಕೋಟಿ 14 ಲಕ್ಷ ಕುಟುಂಬಕ್ಕೆ ಗೃಹಜ್ಯೋತಿ ಯೋಜನೆ ಫಲಾನುಭವಿಗಳಿದ್ದಾರೆ. ನಾವು ನೀಡಿದ ಆಶ್ವಾಸನೆಯಂತೆ ಜನರಿಗೆ ಉಚಿತ ವಿದ್ಯುತ್ ನೀಡುತ್ತೇವೆ. 200 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸಿದ್ರೆ ಅದಕ್ಕೆ ಬಿಲ್ ಪಾವತಿಸಬೇಕಾಗುತ್ತೆ. ೧೦೦ ಯೂನಿಟ್ವರೆಗೆ ಒಂದು ಸ್ಲ್ಯಾಬ್ ಹಾಗೂ ೧೦೦ ಯೂನಿಟ್ ಮೇಲೆ ಇನ್ನೊಂದು ಸ್ಲ್ಯಾಬ್ ಇದೆ. ಇನ್ನು ಕೈಗಾರಿಕೆಗಳಿಗೆ ವಿಧಿಸಲಾಗಿರುವ ಬಿಲ್ಗಳನ್ನು ಮರು ಪರಿಶೀಲಿಸಲಾಗುವುದು ಎಂದಿದ್ದಾರೆ.
ವಿದ್ಯುತ್ ದರ ಏರಿಕೆ ಮಾಡಿದ್ದು ನಾವಲ್ಲ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರ. ಆದ್ರೆ ಅದನ್ನು ನಮ್ಮ ಮೇಲೆ ಹಾಕಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಬಿಲ್ ಜಾಸ್ತಿ ಮಾಡಲಿಲ್ಲ. ಅದನ್ನ ಈಗ ಹೆಚ್ಚಿಸಿದ್ದಾರೆ.