ಯಲ್ಲಾಪುರ, ಜೂ 29 (DaijiworldNews/MS): ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಯುವಕನೋರ್ವ ಸಾವಿಗೆ ಶರಣಾಗಿರುವ ಘಟನೆ ಯಲ್ಲಾಪುರ ತಾಲೂಕಿನ ತೇಲಂಗಾರ ಗ್ರಾಮದಲ್ಲಿ ನಡೆದಿದೆ.
ತೇಲಂಗಾರದ ಕಿರಗಾರಿಮನೆಯ ನಿವಾಸಿ ನಾಗರಾಜ ಗಣಪತಿ ಗಾಂವ್ಕರ (35) ಮೃತ ವ್ಯಕ್ತಿ. . ಮನೆಯ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹವ್ಯಕ ಸಮುದಾಯದ ಯುವಕರಿಗೆ ಮದುವೆಗೆ ಕನ್ಯೆ ಸಿಗುವುದು ಇತ್ತೀಚೆಗೆ ಕಷ್ಟವಾಗಿದೆ.ನಾಗರಾಜ ಗಾಂವ್ಕರ್, ಕೃಷಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಲು ಕನ್ಯೆ ಸಿಗುದಿಲ್ಲ ಅಂತ ಮನನೊಂದಿದ್ದ. ಈ ಹಿನ್ನೆಲೆಯಲ್ಲಿ ದುಡುಕಿನ ನಿರ್ಧಾರ ತೆಗೆದುಕೊಂಡು ತನ್ನ ಬದುಕನ್ನೇ ಅಂತ್ಯಗೊಳಿಸಿದ್ದಾನೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ – 9152987821