ಮುಂಬೈ, ಜೂ 29 (DaijiworldNews/HR): ಸಂಪೂರ್ಣವಾಗಿ ಎಥೆನಾಲ್ನಿಂದ ಚಲಿಸುವ ವಾಹನಗಳನ್ನು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಆಗಸ್ಟ್ ತಿಂಗಳಲ್ಲಿ ಸಂಪೂರ್ಣವಾಗಿ ಎಥೆನಾಲ್ನಿಂದ ಚಲಿಸುವ ವಾಹನಗಳನ್ನು ಬಿಡುಗಡೆ ಮಾಡಲಾಗುವುದು. ಬಜಾಜ್, ಟಿವಿಎಸ್ ಮತ್ತು ಹೀರೊ ಕಂಪನಿಯ ಬೈಕ್ ಮತ್ತು ಸ್ಕೂಟರ್ಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಇನ್ನು ಈ ವಾಹನಗಳು ಇವು ಶೇ. 100ರಷ್ಟು ಎಥೆನಾಲ್ನಲ್ಲೇ ಚಲಿಸುತ್ತವೆ. ಇನ್ಮುಂದೆ ನಾವು ಎಲೆಕ್ಟ್ರಿಕ್ ವಾಹನಗಳನ್ನು ಮಾತ್ರ ತಯಾರಿಸುತ್ತೇವೆ ಎಂದಿದ್ದಾರೆ.
ಟೊಯೊಟೊ ಕಂಪನಿಯು ಶೇ 60ರಷ್ಟು ಎಥೆನಾಲ್ ಹಾಗೂ ಶೇ 40ರಷ್ಟು ಎಲೆಕ್ಟ್ರಿಕ್ನೊಂದಿಗೆ ಚಲಿಸುವ ವಾಹನವನ್ನು ಬಿಡುಗಡೆ ಮಾಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ಎಥೆನಾಲ್ ದರ ಲೀಟರ್ ಗೆ 60 ರೂ. ಪೆಟ್ರೋಲ್ ದರ ಲೀಟರ್ ಗೆ 120 ರೂ. ಎಥೆನಾಲ್ 40 ಶೇ. ವಿದ್ಯುತ್ತನ್ನು ಉತ್ಪಾದಿಸುತ್ತದೆ. ಹಾಗಾಗಿ ಎಥೆನಾಲ್ ಗೆ ಲೀಟರ್ ಗೆ15 ರೂ. ಖರ್ಚು ಮಾಡಿದಂತೆ ಆಗುತ್ತದೆ ಎಂದು ತಿಳಿಸಿದ್ದಾರೆ.