ಬೆಂಗಳೂರು, ಜೂ 29 (DaijiworldNews/MS): ವಿಧಾನಸಭೆ ಸೋಲಿನ ಹಿನ್ನೆಲೆ ಬಿಜೆಪಿ ನಾಯಕರ ವಿರುದ್ಧ ಮಾಜಿ ಸಚಿವ ರೇಣುಕಾಚಾರ್ಯ ಇಂದು ಮತ್ತೆ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ನಾನು ಪಕ್ಷದ ವಿರುದ್ಧ ಮಾತನಾಡುವುದಿಲ್ಲ. ಪಕ್ಷ ನನಗೆ ತಾಯಿ ಸಮಾನ. ಆದರೆ ಕೆಲವು ದೌರ್ಬಲ್ಯಗಳ ಬಗ್ಗೆ ನಾನು ಮಾತನಾಡಬೇಕಾಗುತ್ತದೆ. ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕುವುದೇ ಕೆಲಸ. ಯಾರು ಮಾತನಾಡುತ್ತಾರೆ ಅವರನ್ನು ಮುಗಿಸೋದು. ಪಾರ್ಟಿ ಆಫೀಸನ್ನು ಕೆಲವರು ಕಾರ್ಪೊರೇಟ್ ಕಚೇರಿ ಮಾಡಿಕೊಂಡಿದ್ದರು ಎಂದು ಕಿಡಿಕಾರಿದರು.
ಇನ್ನು ನಿನ್ನೆ ದಾವಣಗೆರೆಯಲ್ಲಿ ಮಾತನಾಡಿದ ರೇಣುಕಾಚಾರ್ಯ, ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಇದರಿಂದ ಅವರು ನೈತಿಕ ಹೊಣೆಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಬಹಿರಂಗವಾಗಿಯೇ ಆಗ್ರಹಿಸಿದ್ದರು.
ಪಕ್ಷ ಕಟ್ಟಿದವರು ಯಡಿಯೂರಪ್ಪ, ಅನಂತ್ ಕುಮಾರ್, ಈಶ್ವರಪ್ಪ, ಜಗದೀಶ ಶೆಟ್ಟರ್. ಆದ್ರೆ, ಈಗ ಅನಂತಕುಮಾರ ನಮ್ಮೊಂದಿಗಿಲ್ಲ. ಉಳಿದ ಮೂರು ಜನರನ್ನ ಮುಗಿಸಿ ಹಾಕಿದ್ದೀರಿ ಎಂದು ಆರೋಪಿಸಿದ್ದರು