ಬೆಂಗಳೂರು, ಜೂ 30 (DaijiworldNews/SM): ರಾಜ್ಯದಲ್ಲಿ ವಿವಿಧ ಪದವಿ ಕೋರ್ಸ್ಗಳ ಪರೀಕ್ಷೆಗಳು ಆಗಸ್ಟ್ ನಲ್ಲಿ ನಡೆಯುವುದರಿಂದ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ವಿಸ್ತರಿಸಿರುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ತಿಳಿಸಿದೆ.
2022-23 ಸಾಲಿನ ಸ್ನಾತಕೋತ್ತರ, ಡಿಪ್ಲೋಮಾ ಬಿ.ಫಾರ್ಮ, ಕಾನೂನು ಪದವಿ ಹಾಗೂ ಮುಂತಾದ ಕೋರ್ಸುಗಳ ಪದವಿವಿದ್ಯಾರ್ಥಿಗಳ ಬಸ್ಪಾಸ್ ಜೂನ್ 2023ರ ಅಂತ್ಯದವರೆಗೆ ಮಾತ್ರ ವಿಸ್ತರಿಸಲಾಗಿತ್ತು. ಆದರೆ ಈ ವಿದ್ಯಾರ್ಥಿಗಳ ಪರೀಕ್ಷೆಗಳು ಜುಲೈ/ಆಗಸ್ಟ್ ತಿಂಗಳಲ್ಲಿ ನಡೆಯಲಿವೆ.
ಈ ಕುರಿತು ಆಯಾ ವಿಶ್ವವಿದ್ಯಾನಿಲಯಗಳು ಅಧಿಸೂಚನೆಯನ್ನು ಹೊರಡಿಸಿವೆ. ಈ ಕಾರಣಕ್ಕೆ ಪರೀಕ್ಷೆಗಳಿಗೆ ಹಾಜರಾಗಲಿರುವ ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡುವಂತೆ ಬಸ್ ಪಾಸ್ ಅವಧಿಯನ್ನು ವಿಸ್ತರಿಸುವಂತೆ ಸಾರಿಗೆ ಇಲಾಖೆ ಎಲ್ಲ ನಾಲ್ಕು ನಿಗಮಗಳಿಗೆ ಮನವಿ ಸಲ್ಲಿಸಿದ್ದರು