ಬೆಂಗಳೂರು, ಜು 01 (DaijiworldNews/HR): ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿ ಗ್ರಾಮದಲ್ಲಿ ನಿತ್ಯ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಮಗನನ್ನ ತಂದೆಯೇ ಕೈಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಪುತ್ರ ಆದರ್ಶ್(28) ಮೃತ ಯುವಕ.
ಆದರ್ಶ್ ದಿನವೂ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು, ಇತ್ತೀಚೆಗೆ ತಾಯಿಯ ಬಳಿ ಹಣ ಕೇಳಿದಾಗ ಕೊಡಲಿಲ್ಲವೆಂದು ಆಕೆಯ ಮೇಲೆ ಹಲ್ಲೆ ಮಾಡಿದ್ದ. ಇದರಿಂದ ಬೇಸತ್ತಿದ್ದ ತಂದೆ ಜಯರಾಮಯ್ಯ ಅವರು ಮಗನ ಕೈಕಾಲು ಕಟ್ಟಿಹಾಕಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.