ಬೆಂಗಳೂರು, ಜು 01 (DaijiworldNews/HR): ಕಾಂಗ್ರೆಸ್ ಪಕ್ಷದ ದುರಹಂಕಾರ ಮತ್ತು ದುರಾಡಳಿತವನ್ನ ವಿರೋಧಿಸಿ ನಾವು ಜುಲೈ 4 ರಂದು ಪ್ರತಿಭಟನೆ ಮಾಡಲಿದ್ದೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಚುನಾವಣೆಯ ಸಂದರ್ಭದಲ್ಲಿ ಬೇಷರತ್ ಎಂಬಂತೆ ಬಿಂಬಿಸಿ ಭಾಗ್ಯಗಳನ್ನು ಘೋಷಿಸಿದ ಕಾಂಗ್ರೆಸ್ ಇವತ್ತು ಉಲ್ಟಾ ಹೊಡೆಯುತ್ತಿದೆ. ಇದರಿಂದ ಕರ್ನಾಟಕದ ಜನತೆ ಕೂಡ ತೀರ್ವ ಅಸಮಾಧಾನಗೊಂಡಿದೆ ಎಂದರು.
ಇನ್ನು ಪಂಚೆ ವಿಚಾರ ಪ್ರಸ್ತಾಪಿಸಿ ಟ್ವೀಟ್ ಮಾಡಿರೋ ಸಿದ್ದರಾಮಯ್ಯಗೆ ತಿರುಗೇಟು ನೀಡಿರುವ ಜೋಶಿ, ಕಾಂಗ್ರೆಸ್ ಪಕ್ಷದ ಲೋ ಲೆವೆಲ್ ಲಾಂಗ್ವೇಜ್.. ಆದರೆ ನಾನು ಭಾರತ ಸರ್ಕಾರದ ಮಂತ್ರಿಯಾಗಿ ಆ ಲೆವೆಲ್ ಗೆ ಇಳಿದು ಮಾತಾಡಲ್ಲ. ಆದರೆ ಸಿದ್ದರಾಮಯ್ಯನವರೂ ಸಹ ಲುಂಗಿ ಲೀಡರ್ ಅನ್ನೋದನ್ನ ಕಾಂಗ್ರೆಸ್ ಪಕ್ಷ ಮರೆಯಬಾರದು. ನಾವೂ ಸಹ ಅದೇ ಭಾಷೆಯಲ್ಲಿ ಉತ್ತರ ಕೊಡಬಹುದು. ಆದರೆ ಆ ಲೆವೆಲ್ ಗೆ ಇಳಿಯಲ್ಲ ಎಂದರು.