ಬೆಂಗಳೂರು,ಜು 3 (DaijiworldNews/MS): ಇಂದಿನಿಂದ ಆರಂಭವಾಗುವ 16ನೇ ವಿಧಾನಸಭೆ ಮೊದಲ ಜಂಟಿ ಬಜೆಟ್ ಅಧಿವೇಶಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ಅಧಿವೇಶನ ಆರಂಭವಾಗಲಿದೆ.
ಆದರೆ ಈ ಬಾರಿ ಪ್ರತಿಪಕ್ಷವಾಗಿರುವ ಬಿಜೆಪಿಯಲ್ಲಿ ಇನ್ನು ಕೂಡ ಸಭಾ ನಾಯಕನನ್ನೇ ಆಯ್ಕೆ ಮಾಡದ ಕಾರಣ ವಿಪಕ್ಷ ನಾಯಕನಿಲ್ಲದೆ ಇಂದಿನಿಂದ ಅಧಿವೇಶನ ಪ್ರಾರಂಭವಾಗುವುದು ಬಹುತೇಕ ಪಕ್ಕಾ ಆಗಿದೆ.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ದೆಹಲಿಯಿಂದ ವೀಕ್ಷಕರು ಆಗಮಿಸಲಿದ್ದು ಆ ಬಳಿಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪನವರು ದೆಹಲಿಯಲ್ಲಿ ಹೇಳಿದ್ದಾರೆ. ಹೀಗಿರುವಾಗ, ಒಂದೆರಡು ದಿನ ವಿರೋಧ ಪಕ್ಷದ ನಾಯಕನಿಲ್ಲದೆ ವಿಧಾನಸಭೆ ಕಾರ್ಯ-ಕಲಾಪ ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.