ಭೋಪಾಲ್ , ಜು 3 (DaijiworldNews/AK): ಪತ್ನಿಯ ಶವವನ್ನು ಪತಿಯೊಬ್ಬ ಮೂರು ದಿನಗಳ ಕಾಲ ಮನೆಯ ಫ್ರೀಜರ್ ನಲ್ಲಿಟ್ಟ ಘಟನೆ ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟಮಹಿಳೆಯನ್ನು ಸುಮಿತ್ರಿ (40) ಎಂದು ಗುರುತಿಸಲಾಗಿದೆ.
ಭಾನುವಾರದಂದು ಮೃತ ಮಹಿಳೆಯ ಸಹೋದರ ಕೊಲೆ ಆರೋಪದ ಮೇಲೆ ದೂರು ನೀಡಿದ ಬಳಿಕ ಶವವನ್ನು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ನನ್ನ ಪತ್ನಿ ಜಾಂಡೀಸ್ ನಿಂದ ಮೃತಪಟ್ಟಿದ್ದಾಳೆ. ತಮ್ಮ ಮಗ ಮುಂಬೈಯಿಂದ ಬರುವವರೆಗೆ ನಾನು ಶವವನ್ನು ಫ್ರೀಜರ್ ನಲ್ಲಿಟ್ಟಿದ್ದೆ. ಆ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಿದ್ದೆ ಎಂದು ಸುಮಿತ್ರಿ ಅವರ ಪತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಆದರೆ ಸುಮಿತ್ರಿ ಅವರ ಸಹೋದರ ತನ್ನ ಭಾವ ಅಕ್ಕನ ಮೇಲೆ ದೌರ್ಜನ್ಯವೆಸಗುತ್ತಿದ್ದರು. ಅವರೇ ಅಕ್ಕನನ್ನು ಹತ್ಯೆಗೈದು ಶವವನ್ನು ಫ್ರೀಜರ್ ನಲ್ಲಿಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಹೋದರನ ದೂರಿನ ಹಿನ್ನಲೆಯಲ್ಲಿ ಮಹಿಳೆಯ ಶವವನ್ನು ನಾವು ವಶಪಡಿಸಿಕೊಂಡಿದ್ದೇವೆ. ಆಕೆಯ ಸಹೋದರ ಅಭಯ್ ತಿವಾರಿ ತನ್ನ ಭಾವ ಅವರನ್ನು ಹತ್ಯೆ ಮಾಡಿದ್ದೇನೆ ಎಂದು ದೂರು ನೀಡಿದ ನಂತರ ನಾವು ಶವವನ್ನು ವಶಕ್ಕೆ ಪಡೆದುಕೊಂಡಿದ್ದೇವೆ” ಎಂದು ಸಿಟಿ ಕೊತ್ವಾಲಿ ಪೊಲೀಸ್ ಇನ್ಸ್ಪೆಕ್ಟರ್ ಹೇಳಿದ್ದಾರೆ.