ಮುಂಬೈ, ಜೂ 03 (DaijiworldNews/HR): ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಮಹಾ ಟ್ವಿಸ್ಟ್ ನಲ್ಲಿ ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು,ಈ ಬಾರಿ ‘ಡೀಲ್’ ದೊಡ್ಡದಾಗಿರಬೇಕು. ಸಿಎಂ ಏಕನಾಥ್ ಶಿಂಧೆ ಮತ್ತು ಶಿವಸೇನೆಯ ಬಂಡಾಯ ಅಭ್ಯರ್ಥಿಗಳನ್ನು ಶೀಘ್ರದಲ್ಲಿ ಅನರ್ಹ ಮಾಡಲಾಗುತ್ತದೆ. ಅಜಿತ್ ಪವಾರ್ ಗೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ಠಾಕ್ರೆ ಉದ್ಬವ್ ಬಣ ಲೇವಡಿ ಮಾಡಿದೆ.
ಕಳೆದ ವರ್ಷ ಶಿವಸೇನೆಯನ್ನು ಇಬ್ಭಾಗ ಮಾಡಿ ಏಕನಾಥ್ ಶಿಂಧೆ ಬಣದ ಸಹಾಯದಿಂದ ಸರ್ಕಾರ ಕಟ್ಟಿದ್ದ ಬಿಜೆಪಿ ಇದೀಗ ಮತ್ತೊಂದು ವಿರೋಧ ಪಕ್ಷ ಎನ್ ಸಿಪಿಯನ್ನು ಒಡೆದಿದೆ.
ಈ ನಡುವೆ ಉದ್ಧವ್ ಠಾಕ್ರೆ ಬಣದ ಶಿವಸೇನೆಯು ಶೀಘ್ರದಲ್ಲೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸ್ಥಾನದಲ್ಲಿ ಅಜಿತ್ ಪವಾರ್ ಇರಲಿದ್ದಾರೆ ಎಂದಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮಹಾರಾಷ್ಟ್ರದ ರಾಜಕೀಯವನ್ನು ಮಾತ್ರವಲ್ಲದೆ ದೇಶದ ರಾಜಕೀಯವನ್ನು ಕೆಸರು ಮಾಡಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ.
ಅಜಿತ್ ಪವಾರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪವಾರ್ ಅವರು ಡಿಸಿಎಂ ಹುದ್ದೆಗಾಗಿ ಹೋಗಿಲ್ಲ. ಸಿಎಂ ಏಕನಾಥ್ ಶಿಂಧೆ ಮತ್ತು ಶಿವಸೇನೆಯ ಬಂಡಾಯ ಅಭ್ಯರ್ಥಿಗಳನ್ನು ಶೀಘ್ರದಲ್ಲಿ ಅನರ್ಹ ಮಾಡಲಾಗುತ್ತದೆ. ಅಜಿತ್ ಪವಾರ್ ಗೆ ಪಟ್ಟಾಭಿಷೇಕ ಮಾಡಲಾಗುತ್ತದೆ ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.