ಬೆಂಗಳೂರು, ಜೂ 03 (DaijiworldNews/HR): ವಿಧಾನ ಪರಿಷತ್ತಿಗೆ ನೂತನವಾಗಿ ಜಗದೀಶ್ ಶೆಟ್ಟರ್, ಎನ್.ಎಸ್.ಬೋಸರಾಜ್, ತಿಪ್ಪಣಪ್ಪ ಕಮಕನೂರು ಅವರು ಆಯ್ಕೆಯಾಗಿದ್ದು, ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಜಗದೀಶ ಶೆಟ್ಟರ್ ಮತ್ತು ಎನ್.ಎಸ್.ಭೋಸರಾಜು ಅವರು ಭಗವಂತನ ಹೆಸರಿನ ಮೇಲೆ ಹಾಗೂ ತಿಪ್ಪಣಪ್ಪ ಕಮಕನೂರು ಅವರು ಯಾನಾಗುಂದಿ ಮಾತಾ ಮಾಣಿಕೇಶ್ವರಿ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿದರು.
ಇನ್ನು ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಶಾಸಕರುಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸಭಾಪತಿಗಳು ನೂತನ ಶಾಸಕತ್ರಯರಿಗೆ ಸದನದ ನಿಯಮಾವಳಿಗಳು ಒಳಗೊಂಡ ಕಿಟ್ ಹಸ್ತಾಂತರಿಸಿದರು.