ನವದೆಹಲಿ, ಜು 3 (DaijiworldNews/MS): ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಆಜಾದ್ ಇತ್ತೀಚೆಗೆ ದೆಹಲಿ ಹಾಗೂ ಇತರೆಡೆಗಳಲ್ಲಿ ನೀಡಿರುವ ಕೆಲವು ಹೇಳಿಕೆಗಳು ನೋವುಂಟು ಮಾಡಿದ್ದು, ಆ ಕಾರಣಕ್ಕೆ ಅವರ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಬಂಧನಕ್ಕೆ ಒಳಗಾಗಿರುವ ನಾಲ್ವರು ಆರೋಪಿಗಳು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಆಜಾದ್ ಅವರ ಹೇಳಿಕೆಯಿಂದ ನಮಗೆ ಘಾಸಿಯುಂಟಾಗಿತ್ತು. ಆದ್ದರಿಂದ ದಾಳಿ ಮಾಡಿದೆವು ಎಂದು ಆರೋಪಿಗಳು ಹೇಳಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆದರೆ ಆಜಾದ್ ಯಾವ ಹೇಳಿಕೆ ನೀಡಿದ್ದಕ್ಕೆ ದಾಳಿ ನಡೆಸಲಾಗಿದೆ ಎಂಬುದನ್ನು ಪೊಲೀಸರು ಬಹಿರಂಗಪಡಿಸಿಲ್ಲ.
ಉತ್ತರ ಪ್ರದೇಶದ ದೇಬಂದ್ನಲ್ಲಿ ಆಜಾದ್ ಸಂಚರಿಸುತ್ತಿದ್ದ ವಾಹನದ ಮೇಲೆ ಗುಂಡಿನ ದಾಳಿ ನಡೆದಿತ್ತು. ನಿನ್ನೆಯಷ್ಟೇ ಪೊಲೀಸರು ದೇವಬಂದ್ನ ವಿಕಾಸ್, ಪ್ರಕಾಶ್, ಲವೀಶ್ ಹಾಗೂ ಹರಿಯಾಣದ ವಿಕಾಸ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.