ಬೆಂಗಳೂರು, ಜು 6 (DaijiworldNews/MS): ರಾಜ್ಯದಲ್ಲಿ ಸದ್ಯ ಬಿಸಿ ಬಿಸಿ ಸುದ್ದಿಯಲ್ಲಿರುವ ಟೊಮೊಟೊ ಬೆಲೆ ಮತ್ತು ವರ್ಗಾವಣೆ ದಂಧೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರತೀಯ ಜನತಾ ಪಾರ್ಟಿಯೂ ಕಾಂಗ್ರೆಸ್ ಕಾಲೆಳೆದಿದೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ ಎಂದು ನಮೂದಿಸಿ ಅದರಲ್ಲಿಟೊಮಾಟೋ ಬೀನ್ಸ್ ತರಕಾರಿ ಬೆಲೆ ನಮೂದಿಸಿದೆ. ಇದರೊಂದಿಗೆ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಆರೋಪಿಸಲಾದ ವರ್ಗಾವಣೆ ದರವನ್ನು ಬಿಜೆಪಿ ಪ್ರಕಟಿಸಿ ಸರ್ಕಾರದ ಲೇವಡಿ ಮಾಡಿದೆ.
ಇದರೊಂದಿಗೆ ಕೇಂದ್ರದ ಸುರ್ಜೇವಾಲಾ ಕಮಿಷನ್ ಪ್ರತ್ಯೇಕ ಎಂದಿರುವ ಬಿಜೆಪಿ ಎಟಿಎಂ ಸರ್ಕಾರದ ಪರವಾಗಿ ್ ಶ್ಯಾಡೋಸಿಎಂ ಯತೀಂದ್ರ ಎಂದು ಹೇಳಿದೆ.
ರಾಜ್ಯದಲ್ಲಿ ಅಗತ್ಯ ವಸ್ತುಗಳು ಹಾಗೂ ಅಗತ್ಯ ಹುದ್ದೆಗಳ ಇಂದಿನ ದರ*:
ತರಕಾರಿ:
🍅 ಟೊಮೆಟೊ - ₹120-130
🫛 ಬೀನ್ಸ್ - ₹120
🥕 ಕ್ಯಾರೆಟ್ - ₹110
🌶️ ಹಸಿಮೆಣಸಿನಕಾಯಿ - ₹170
ವರ್ಗಾವಣೆ ತರಹೇವಾರಿ:
👷♂️ ಮುಖ್ಯ ಎಂಜಿನಿಯರ್: ₹5 ಕೋಟಿ
👨⚕️ ಜಿಲ್ಲಾ ಆರೋಗ್ಯಾಧಿಕಾರಿ: ₹2 ಕೋಟಿ
🕵🏻 ಲೆಕ್ಕಾಧಿಕಾರಿ: ₹ 2.25 ಕೋಟಿ
👨💼 ತಹಶೀಲ್ದಾರ್: ₹1.25 ಕೋಟಿ
👮 ಪೊಲೀಸ್ ಸಬ್ ಇನ್ಸ್ಪೆಕ್ಟರ್:
📍 ಬೆಂಗಳೂರು ನಗರ - ₹1.5 ಕೋಟಿ
📍 ಜಿಲ್ಲಾ ಕೇಂದ್ರ - ₹80 ಲಕ್ಷ
📍 ತಾಲ್ಲೂಕು ಕೇಂದ್ರ: ₹40 ಲಕ್ಷ