ಬೆಂಗಳೂರು, ಜು 7 (DaijiworldNews/MS): ಸಿಎಂ ಸಿದ್ದರಾಮಯ್ಯ ಅವರು ಮಂಡನೆ ಮಾಡಿದ ಬಜೆಟ್ ನಾಲಾಯಕ್ ಬಜೆಟ್ ಆಗಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಳ್ಳು ಮೋಸ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ್ದು ಮಾತ್ರ ಬಜೆಟ್ ಪುಸ್ತಕದಲ್ಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ದಾರವಾಡದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಸಕ್ತ ಸಾಲಿನ ಬಜೆಟ್ದಲ್ಲಿ ಆಸ್ತಿ, ಮದ್ಯ ತೆರಿಗೆ ಹೆಚ್ಚಳ ಮಾಡಿದ್ದಾರೆ. ಶೇ 10ರಷ್ಟು ತೆರಿಗೆ ಹೆಚ್ಚಿಸಿದ್ದಾರೆ. ಮತ್ತೆ ಯಾವ ಯಾವ ತೆರಿಗೆ ಹೆಚ್ಚಳ ಮಾಡ್ತಾರೆ ನೋಡೋಣ ಯಾವುದೇ ಪ್ಲಾನಿಂಗ್, ಗುರಿ ಇಲ್ಲದ ಬಜೆಟ್ ಮಂಡನೆ ಇದಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು ಡಿಕೆಶಿವಕುಮಾರ್ ಚುನಾವಣೆ ಮೊದಲು ಪಾದಯಾತ್ರೆ ಮಾಡಿ ಮೇಕೆದಾಟುಗೆ 3 ಸಾವಿರ, ಮಹದಾಯಿಗೆ 10 ಕೋಟಿ ಮೀಸಲು ಎಂದು ಹೇಳಿದ್ದರು. ಆದರೆ ಈಗ ಬಜೆಟ್ ನಲ್ಲಿ ಅದಕ್ಕೆ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ