ಬೆಂಗಳೂರು, ಜು 8 (DaijiworldNews/MS): ಭ್ರಷ್ಟಾಚಾರ ಆರೋಪದಲ್ಲಿ ತಮಿಳುನಾಡಿನ ಮಾಜಿ ಸಿಎಂ ಜೆ. ಜಯಲಲಿತಾರಿಂದ ವಶಪಡಿಸಿಕೊಳ್ಳಲಾಗಿದ್ದ ಕೋಟ್ಯಂತರ ರೂ. ಬೆಲೆ ಬಾಳುವ 11,344 ಜರತಾರಿ ಸೀರೆಗಳು, ಬೆಳ್ಳಿ ಲೇಪಿತ ಸಾಮಗ್ರಿಗಳನ್ನು ಬೆಂಗಳೂರಿಗೆ ಸ್ಥಳಾಂತರಿಸುವಂತೆ ಆರ್ಟಿಐ ಕಾರ್ಯಕರ್ತ ಟಿ. ನರಸಿಂಹಮೂರ್ತಿ ಅವರು ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಯಂತ್ರಣ ಮಹಾ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಜಯಲಲಿತಾರಿಂದ ವಶಪಡಿಸಿಕೊಳ್ಳಲಾಗಿರುವ ೨೮ ವಸ್ತುಗಳನ್ನು ಹರಾಜು ಹಾಕಲು ಬೆಂಗಳೂರು ಕೋರ್ಟ್ನ ವಶಕ್ಕೆ ಒಪ್ಪಿಸಬೇಕು. ಈ ವಸ್ತುಗಳನ್ನು ೧೯೯೬ರ ಡಿಸೆಂಬರ್ನಲ್ಲಿ ಚೆನ್ನೈನ ಅವರ ನಿವಾಸದಿಂದ ಜಪ್ತಿ ಮಾಡಲಾಗಿತ್ತು.
ಇವುಗಳಲ್ಲಿ700 ಕೆ.ಜಿ. ಬೆಳ್ಳಿ ಸಾಮಗ್ರಿಗಳು, ಬೆಲೆಬಾಳುವ 11,344 ಸೀರೆಗಳು, 44 ಎಸಿ, 131 ಸೂಟ್ಕೇಸ್ಗಳು, 91 ವಾಚ್ಗಳು, 146 ಚೇರ್ಗಳು, 750 ಚಪ್ಪಲಿಗಳು, 215 ಗ್ಲಾಸ್ಗಳು, 27 ಗೋಡೆ ಗಡಿಯಾರಗಳು, 86 ಫ್ಯಾನ್ಗಳು, 146 ಅಲಂಕಾರಿಕ ಪರಿಕರಗಳು, 81 ತೂಗುದೀಪಗಳು, 20 ಸೋಫಾ ಸೆಟ್ಗಳು, 250 ಶಾಲ್ಗಳು, 12 ಫ್ರಿಡ್ಜ್ಗಳು, 10 ಟಿ.ವಿ. ಸೆಟ್ಗಳು, 8 ಸಿವಿಆರ್ಗಳು ಮತ್ತು 140 ವೀಡಿಯೋ ಕ್ಯಾಸೆಟ್ಗಳು ಇವುಗಳಲ್ಲಿ ಸೇರಿವೆ.