ನಾಗ್ಪುರ, ಜು 14 (DaijiworldNews/HR): ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಮಾಡಿದ ಆರೋಪದ ಮೇಲೆ ಬಂಧಿತನಾಗಿರುವ ಜಯೇಶ್ ಪೂಜಾರಿಗೆ ಬೆಂಗಳೂರು ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಆರೋಪಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಅಫ್ಸರ್ ಪಾಷಾ ನಡುವೆ ಸಂಪರ್ಕವಿದೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.
ನಿತಿನ್ ಗಡ್ಕರಿ ಮತ್ತು ಜಯೇಶ್ ಪೂಜಾರಿ
ಜಯೇಶ್ ಪೂಜಾರಿ, ಅಲಿಯಾಸ್ ಕಾಂತ (ಶಾಕೀರ್) ಈ ಹಿಂದೆ ಪಾಷಾ ಜತೆಗೆ ಬೆಳಗಾವಿ ಜೈಲಿನಲ್ಲಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇನ್ನು ನಾಗ್ಪುರದಲ್ಲಿರುವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜನವರಿ 14 ರಂದು ಜಯೇಶ್ ಪೂಜಾರಿ ಬೆದರಿಕೆ ಕರೆ ಮಾಡಿ, 100 ಕೋಟಿ ರೂ.ಗೆ ಬೇಡಿಕೆ ಇಟ್ಟು, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್ನ ಸದಸ್ಯ ಎಂದು ಹೇಳಿಕೊಂಡಿದ್ದ.
ಮಾರ್ಚ್ 21 ರಂದು ಮತ್ತೊಂದು ಕರೆ ಮಾಡಿ, ಗಡ್ಕರಿ ಅವರಿಗೆ 10 ಕೋಟಿ ರೂ. ಪಾವತಿಸದಿದ್ದರೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದು, ಆತನನ್ನು ಪೊಲಿಸರು ಮಾರ್ಚ್ 28 ರಂದು ಬಂಧಿಸಿದ್ದಾರೆ.