ಹೊಸದಿಲ್ಲಿ, ಜು 16 (DaijiworldNews/AK): ಶಿವನ ಭಕ್ತರಾದ ಕನ್ವರಿಯಾ ಗುಂಪೊಂದು ಮೆರವಣಿಗೆ ಮೂಲಕ ಹರಿದ್ವಾರದಿಂದ ಬರುತ್ತಿದ್ದಾಗ ವಿದ್ಯುತ್ ಅವಘಡ ಸಂಭವಿಸಿ ಐವರು ಕನ್ವರ್ ಯಾತ್ರಾರ್ಥಿಗಳು ಸಾವನ್ನಪ್ಪಿದ ಘಟನೆ ಮೀರತ್ ಜಿಲ್ಲೆಯ ರಾಲಿ ಚೌಹಾಣ್ ಗ್ರಾಮದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಯಾತ್ರಾರ್ಥಿಗಳಿದ್ದ ವಾಹನದ ಮೇಲೆ ಭಕ್ತಿ ಗೀತೆ ಪ್ರಸಾರವಾಗುತ್ತಿದ್ದ ಮೈಕ್ ಅಳವಡಿಸಲಾಗಿತ್ತು. ಈ ವಾಹನವು ಮೀರತ್ ಜಿಲ್ಲೆಯ ರಾಲಿ ಚೌಹಾಣ್ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಕೆಳಗಡೆ ಇದ್ದ ಹೈವೋಲ್ಟೇಜ್ ವಿದ್ಯುತ್ ಲೈನ್ ಗೆ ಸ್ಪರ್ಶಿಸಿದೆ. ವಾಹನ ಮತ್ತು ಸುತ್ತ ಸೇರಿದ್ದ ಜನರಿಗೆ ವಿದ್ಯುತ್ ಸ್ಪರ್ಶವಾಗುತ್ತಿದ್ದಂತೆ ಒಬ್ಬರಾದ ಮೇಲೆ ಒಬ್ಬರಂತೆ ಉರುಳಿ ಬಿದ್ದಿದ್ದಾರೆ.
ತಕ್ಷಣ ಜನರು ವಿದ್ಯುತ್ ಸ್ಥಗಿತಗೊಳಿಸುವಂತೆ ಸ್ಥಳೀಯ ಪ್ರಸರಣ ಸಂಸ್ಥೆಗೆ ಕರೆ ಮಾಡಲಾಯಿತು. ಆದ್ರೂ ಪ್ರಯೋಜವಾಗಿಲ್ಲ ಯಾತ್ರಾರ್ಥಿಗಳಲ್ಲಿ ಒಬ್ಬನಾದ ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಇನ್ನು ನಾಲ್ವರು ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನು5 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.ಈ ದುರಂತವನ್ನು ಖಂಡಿಸಿ ಗ್ರಾಮಸ್ಥರು , ರಸ್ತೆ ತಡೆದು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಪಘಾತಕ್ಕೆ ಕಾರಣರಾದ ವಿದ್ಯುತ್ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.