ನವದೆಹಲಿ, ಜು 16 (DaijiworldNews/HR): ಸಿಡ್ನಿಯಿಂದ ನವದೆಹಲಿಗೆ ಹಾರುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೊಬ್ಬ ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ನಿಂದಿಸಿರುವ ಘಟನೆ ನಡೆದಿದೆ.
ವಿಮಾನದಲ್ಲಿ ಪ್ರಯಾಣಿಕ ಜೋರಾದ ದನಿಯಲ್ಲಿ ಮಾತನಾಡುತ್ತಿದ್ದು, ಏರ್ ಇಂಡಿಯಾ ಅಧಿಕಾರಿಯು ತನ್ನ ಸಹ-ಪ್ರಯಾಣಿಕನ ಜೋರಾಗಿ ಧ್ವನಿಯನ್ನು ಸರಿಪಡಿಸಲು ಬಂದಾಗ, ಪ್ರಯಾಣಿಕನು ಅವನಿಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ವರದಿಯಾಗಿದೆ.
ಇನ್ನು ಈ ವಿಷಯದ ಬಗ್ಗೆ ವಾಯುಯಾನ ನಿಯಂತ್ರಣ ಮಹಾನಿರ್ದೇಶನಾಲಯ (ಡಿಜಿಸಿಎ) ಗೆ ತಿಳಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ.