ಬೆಂಗಳೂರು, ಜು 18 (DaijiworldNews/HR): ತೀವ್ರವಾದ ಬರಗಾಲದಿಂದಾಗಿ ಬಿತ್ತನೆ ಬೀಜಗಳು ಹಾಳಾಗಿರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಾನುವಾರುಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದೆ ಹಾಗಾಗಿ ರೈತರ ಪರವಾಗಿ ಸರಕಾರ ತಕ್ಷಣವೇ ಪರಿಹಾರ ನೀಡಬೇಕು ಎಂದು ಕೋಟಾ ಶ್ರೀನಿವಾಸ್ ಪೂಜಾರಿ ಆಗ್ರಹಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಎಪಿಎಂಸಿ ಕಾಯ್ದೆಯಡಿ ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಿತ್ತು. ಆದರೆ ಈ ಹಿಂದಿನ ಎಪಿಎಂಸಿ ಕಾಯ್ದೆಯನ್ನು ಕಾಂಗ್ರೆಸ್ ಸರಕಾರ ತಿದ್ದುಪಡಿ ಮಾಡಿದ್ದು, ರೈತ ವಿರೋಧಿ ರಾಜ್ಯ ಸರಕಾರವನ್ನು ವಿರೋಧಿಸುತ್ತಿದ್ದೇವೆ ಎಂದರು.
ಇನ್ನು ನೀವು 2000 ಹಣ ನೀಡಿದ್ದೀರಿ, 6000 ಹಣ ಹೆಚ್ಚು ಖರ್ಚು ಮಾಡುವ ಸ್ಥಿತಿ ಎದುರಾಗಿದ್ದು, ಜನಸಾಮಾನ್ಯರಿಗೆ 6000 ಹಣ ಹೆಚ್ಚು ಖರ್ಚು ಮಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
4000 ರೂ. ಕೃಷಿ ಸಮ್ಮಾನ್ ಯೋಜನೆ ತಡೆ ಹಿಡಿದಿದ್ದೀರಿ. ಘಟ್ ಬಂಧನ್ ಮಾಡಲು ಸರಕಾರಿ ಯಂತ್ರವನ್ನು ಉಪಯೋಗಿಸುತ್ತಿದ್ದೀರಿ. ಸರಕಾರವೇ ಘಟ್ ಬಂಧನ್ ಸೇವಕರಾಗಿ ಪರಿವರ್ತನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.