ಬೆಂಗಳೂರು, ಜು 19 (DaijiworldNews/AK): ಹೆಸರು ಬದಲಾವಣೆ ಬಿಟ್ಟರೆ ಇನ್ನೇನು ಅನುಕೂಲ ಇಂಡಿಯಾ ಸಭೆಯಿಂದ ಆಗಿಲ್ಲ ಎಂದು ವಿಪಕ್ಷಗಳ ಸಭೆ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯುಪಿಎ ಮೈತ್ರಿಕೂಟಕ್ಕೆ ಇಂಡಿಯಾ ಎಂಬ ನಾಮಕರಣ ಮಾಡಿರುವ ಬಗ್ಗೆ ನಾನು ಯಾಕೆ ಹಗುರವಾಗಿ ಮಾತನಾಡಲಿ. ನಿನ್ನೆ ದಿನ ಯುಪಿಎ ಬದಲಾವಣೆ ಮಾಡಿಕೊಂಡು ಇಂಡಿಯಾ ಅಂತ ಇಟ್ಟಿದ್ದಾರೆ. ಅದು ಅವರಿಗೆ ಸೇರಿದ್ದ ವಿಚಾರ , ಹೆಸರು ಇಟ್ಟ ತಕ್ಷಣ ನಾಡಿನ ಸಮಸ್ಯೆ ಬಗೆಹರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಜನರ ಮೇಲೆ ಹೊರೆ ಹೊರಿಸಿ ಮಾಡಿರುವ ಕಾರ್ಯಕ್ರಮ ಇದು. ಕೊನೆಗೆ ಏನು ಸಂದೇಶ ನೀಡಿದ್ದಾರೆ. ನಾವು ಕಾಂಗ್ರೆಸ್ ನವರು ಪ್ರಧಾನಿ ಹುದ್ದೆಯ ಆಕಾಂಕ್ಷಿ ಅಲ್ಲ ಎಂದು ಕೊನೆಗೆ ಸಂದೇಶ ನೀಡಿದ್ದಾರೆ. ಅದು ಬಿಟ್ಟರೆ ಇನ್ನೇನು ಆಗಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.
ಸಂವಿಧಾನದ ಪ್ರಕಾರ ಇಂಡಿಯಾ ಎಂಬ ಹೆಸರು ಇಡುವಂತಿಲ್ಲ ಎಂಬ ವಾದಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಯಾರಾದರೂ ಕೋರ್ಟ್ ಹೋಗ್ತಾರಾ ಏನು ಮಾಡ್ತಾರೆ ಮುಂದೆ ನೋಡೋಣ ಎಂದರು.