ಕೋಲ್ಕತ್ತಾ, ಜು 21 (DaijiworldNews/MS): ಬಿಜೆಪಿಯ 'ಬೇಟಿ ಬಚಾವೋ' ಘೋಷಣೆ ಈಗ 'ಬೇಟಿ ಜಲಾವೋ' ಆಗಿ ಬದಲಾಗಿದೆ ಎಂದು ಭಾರತೀಯ ಜನತಾ ಪಕ್ಷವನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಬಿಲ್ಕಿಸ್ ಬಾನೋ ಮತ್ತು ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ಶುಕ್ರವಾರ ಬಿಜೆಪಿ ವಿರುದ್ದ ಕಿಡಿಕಾರಿದ್ದು, ನೀವು (ಬಿಜೆಪಿ) 'ಬೇಟಿ ಬಚಾವೋ' ಘೋಷಣೆ ಹೇಳುತ್ತೀರಿ, ಈಗ ನಿಮ್ಮ ಘೋಷಣೆ ಎಲ್ಲಿದೆ..? ಮಣಿಪುರದ ಜನರಿಗೆ ನಾವು ನಮ್ಮ ಬೆಂಬಲ ವ್ಯಕ್ತಪಡಿಸುತ್ತೇವೆ. ಇಂದು ಮಣಿಪುರ ಹೊತ್ತಿ ಉರಿಯುತ್ತಿದೆ. ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಸಿಂಗ್ ಕೂಡ ಜಾಮೀನು ಪಡೆದಿದ್ದಾರೆ" ಎಂದು ಹೇಳಿದ್ದಾರೆ.
"ಮುಂಬರುವ ಚುನಾವಣೆಯಲ್ಲಿ ದೇಶದ ಮಹಿಳೆಯರು ನಿಮ್ಮನ್ನು ದೇಶದ ರಾಜಕೀಯದಿಂದ ಹೊರಹಾಕುತ್ತಾರೆ. ಬಿಜೆಪಿಯ 'ಬೇಟಿ ಬಚಾವೋ' ಈಗ 'ಬೇಟಿ ಜಲಾವೋ' ಆಗಿ ಬದಲಾಗಿದೆ"ಎಂದು ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.