ರಾಯಘಡ,ಏತನ್ನ ಸ್ವಂತ ಮಗಳ ಮೇಲೆ ಪೊಲೀಸ್ ಪೇದೆಯೋರ್ವ ಅತ್ಯಾಚಾರ ನಡೆಸಿದ ಘಟನೆ ರಾಯಘಡದಲ್ಲಿ ನಡೆದಿದೆ.
ಈತ ಪೊಲೀಸ್, ಸಮಾಜದ ರಕ್ಷಣೆ ಮಾಡಬೇಕಾದ ಈ ರಾಕ್ಷಸ ತನ್ನ 6ರ ಹರೆಯದ ಪುಟ್ಟ ಮಗಳ ಮೇಲೆಯೇ ಹೇಯ ಕೃತ್ಯವೆಸಗಿದ್ದಾನೆ. ಇಡೀ ದೇಶದ ಜನರೇ ತಲೆತಗ್ಗಿಸಿ ನಿಲ್ಲಬೇಕಾದ ಕರಾಳ ಘಟನೆ ಇದು. ಈ ಹೇಯ ಕೃತ್ಯ ಮಾರ್ಚ್ 25ರಂದು ನಡೆದಿದ್ದು, ಆರೋಪಿಯ ಪತ್ನಿ ನೀಡಿದ ದೂರಿನ ಹಿನ್ನಲೆ ಘಟನೆ ಬೆಳಕಿಗೆ ಬಂದಿದೆ.
ಆರೋಪಿಯ ಪತ್ನಿ ನೀಡಿರುವ ದೂರಿನ ಪ್ರಕಾರ ಮಗುವಿನ ಮೇಲೆ ಅತ್ಯಾಚಾರ ಎಸಗಿದ ಆತ ಯಾರಿಗಾದರೂ ಹೇಳಿದರೆ ಪರಿಣಾಮ ನೆಟ್ಟಗಿರುವುದಿಲ್ಲವೆಂದು ಎಂದು ಏನೂ ಅರಿಯದ ಮಗುವಿಗೆ ಧಮ್ಕಿ ಹಾಕಿದ್ದ. ಅಪ್ಪ ಯಾಕೆ ಬೆದರಿಕೆ ಹಾಕಿದ್ದಾರೆಂದು ಅರಿಯದ ಮಗು ಮುಗ್ಧತೆಯಲ್ಲಿಯೇ ತಾಯಿ ಬಳಿ ಎಲ್ಲವನ್ನು ಹೇಳಿಕೊಂಡಿತ್ತು. ಹೌಹಾರಿ ಹೋದ ತಾಯಿ ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾಳೆ. ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.
ಆರೋಪಿಯನ್ನು ತಕ್ಷಣ ಅಮಾನತು ಮಾಡಿದ ರಾಯಗಢದ ಎಸ್ಪಿ ರಾಜೇಶ್ ಅಗ್ರವಾಲ್ ಅವರು ತನಿಖೆಗೆ ಆದೇಶಿಸಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಪ್ರಕರಣದ ಸತ್ಯಾಸತ್ಯತೆ ಬಯಲಾಗಲಿದೆ.