ಬೆಂಗಳೂರು, ಜು 25 (DaijiworldNews/MS): ಕಾಂಗ್ರೆಸ್ ಚುನಾವಣೆ ವೇಳೆ ಘೋಷಿಸಿದ ಮೊದಲ ಗ್ಯಾರಂಟಿ ಗೃಹ ಜ್ಯೋತಿ 200 ಯೂನಿಟ್ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆಯ ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ, ಜು. 25 ಕೊನೆಯ ದಿನವಾಗಿದೆ.
ವಿದ್ಯುತ್ ಸರಬರಾಜು ಕಂಪೆನಿ ಗಳು ನೀಡಿದ ಮಾಹಿತಿ ಪ್ರಕಾರ, 1.92 ಕೋಟಿ ಗೃಹ ಬಳಕೆದಾರರಿದ್ದು,ಈ ಪೈಕಿ ಇದುವರೆಗೆ ಅಂದಾಜು 1.18ರಿಂದ 1.20 ಕೋಟಿ ಮಂದಿ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದು ಉಳಿದವರ ನೋಂದಣಿ ಬಾಕಿ ಇದೆ.
ಒಬ್ಬರ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ವಿದ್ಯುತ್ ಮೀಟರ್ ಇರುವುದು ಇದಕ್ಕೆ ಮುಖ್ಯ ಕಾರಣ ಎನ್ನಲಾಗಿದೆ. ಓರ್ವ ವ್ಯಕ್ತಿಗೆ ಹಲವು ಬಾಡಿಗೆ ಮನೆಗಳಿದ್ದು ಗೃಹಜ್ಯೋತಿ ಜೋಡಣೆಯಿಂದ ಅದು ಅನಿವಾರ್ಯವಾಗಿ ಬೆಳಕಿಗೆ ಬರುತ್ತದೆ. ಈ ಮೂಲಕ ತಮ್ಮ ಆದಾಯ ಬೆಳಕಿಗೆ ಬರುತ್ತದೆ ಎಂಬ ಆತಂಕ ಕೆಲವರಿಗೆ ಇದೆ. ಹೀಗಾಗಿ ಕೆಲವರು ಗೃಹಜ್ಯೋತಿ ನೋಂದಣಿಗೆ ಹಿಂದೇಟು ಹಾಕಿದ್ದಾರೆ.
ಇನ್ನು ಮೊದಲ ತಿಂಗಳ ಫಲಾನುಭವಿಗಳಾಗಲು ಮಂಗಳವಾರ, ಜು. 25 ಕೊನೆಯ ದಿನವಾಗಿದ್ದುನೋಂದಣಿ ಮಾಡಿಸಿಕೊಳ್ಳದವರು ಯೋಜನೆ ಅಡಿ ಫಲಾನುಭವಿಗಳಾಗಲು ಒಂದು ತಿಂಗಳು ಕಾಯುವುದು ಅನಿವಾರ್ಯವಾಗಿದ್ದು, ಸೆಪ್ಟಂಬರ್ನಲ್ಲಿ ಇದರ ಲಾಭ ಪಡೆಯಲು ಅವಕಾಶ ಇದೆ. ಅರ್ಜಿ ಸಲ್ಲಿಕೆಗೆ ಸರಕಾರ ಯಾವುದೇ ಕೊನೇ ದಿನಾಂಕ ನಿಗದಿಪಡಿಸಿಲ್ಲ