ಕೊಪ್ಪಳ, ಜು 26 (DaijiworldNews/HR): ನನ್ನನ್ನು ಮತ್ತೆ ಬಿಜೆಪಿಗೆ ಕರೆದರೂ ಹೋಗುವುದಿಲ್ಲ. ಅಲ್ಲಿ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಈಗ ಯಾವ ಪಕ್ಷ ತತ್ವ ಸಿದ್ದಾಂತ ಉಳಿಸಿಕೊಂಡಿದೆ. ಜನಸಂಘದ ತತ್ವ ಸಿದ್ದಾಂತ ಈಗಿನ ಬಿಜೆಪಿಯಲ್ಲಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೆಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಅನುಭವದ ಪ್ರಕಾರ ಕಾಂಗ್ರೆಸ್ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 15 – 20 ಸ್ಥಾನದಲ್ಲಿ ಗೆಲ್ಲಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಜನತೆ ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನ ಕೊಟ್ಟಿದ್ದು, ಈ ಆಧಾರದಲ್ಲಿ ನನ್ನ ರಾಜಕೀಯ ಅನುಭವದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನದಲ್ಲಿ ಗೆದ್ದು ಬಿಜೆಪಿಗೆ ಹೀನಾಯ ಸ್ಥಿತಿ ಎದುರಾಗಿದೆ ಎಂದರು.
ಇನ್ನು ಜನಸಂಘದಲ್ಲಿ ಯಾವುದೇ ಲಿಂಗಾಯತ್ ನಾಯಕರು ಇದ್ದಿರಲಿಲ್ಲ. ಆ ಕಾಲದಲ್ಲಿ ನಾವು ಸಂಘದಲ್ಲಿ ಇದ್ದೇವು. ಅಂಥ ಪಕ್ಷದಲ್ಲಿ ನಾವು ಕೆಲಸ ಮಾಡಿದ್ದೆವು. ಆದರೆ ಅವರೇ ನಮ್ಮನ್ನ ಹೊರ ಹಾಕಿದರು. ಈಗ ಪಕ್ಷ ಸಿದ್ದಾಂತ ಯಾವುದೇ ಪಕ್ಷದಲ್ಲಿ ಉಳಿದಿಲ್ಲ ಎಂದಿದ್ದಾರೆ.