ಸಿಲಿಗುರಿ, ಏ 04(MSP): ಪಶ್ಚಿಮ ಬಂಗಾಲದ ಸಿಲಿಗುರಿಯಲ್ಲಿನ ಬಿಜೆಪಿ ಪಕ್ಷದ ಬೂತ್ ಆಫೀಸಿನಲ್ಲಿ ಏ.4 ರ ಗುರುವಾರ ಮುಂಜಾನೆ ಸುಮಾರು 42 ವರ್ಷದ ವ್ಯಕ್ತಿಯೊಬ್ಬರ ಶವ ನೇಣಿನಲ್ಲಿ ನೇತಾಡುತ್ತಿರುವಂತೆ ಕಂಡುಬಂದಿದೆ. ಮೃತ ವ್ಯಕ್ತಿಯನ್ನು ನಿತ್ಯಾ ಮಂಡಲ್ ಎಂದು ಗುರುತಿಸಲಾಗಿದೆ.
ಈ ಘಟನೆಯ ಹಿನ್ನಲೆಯಲ್ಲಿ ಸ್ಥಳದಲ್ಲಿ ಆತಂಕದ ಪರಿಸ್ಥಿತಿ ತಲೆತೋರಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸಿಲಿಗುರಿಯಲ್ಲಿ ಬೃಹತ್ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಸಿಲಿಗುರಿಯ ಮುನಿಸಿಪಲ್ ಕಾರ್ಪೊರೇಶನ್ನ ವಾರ್ಡ್ ಸಂಖ್ಯೆ 36ರಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ನಿತ್ಯಾ ಮಂಡಲ್ ಕೂಲಿ ಕಾರ್ಮಿಕನಾಗಿದ್ದ. ಬಿಜೆಪಿ ಬೂತ್ ಆಫೀಸ್ ಮಾರ್ಗವಾಗಿ ವಾಯುವಿಹಾರಕ್ಕೆ ತೆರಳುತ್ತಿದ್ದ ಸ್ಥಳೀಯರು ಶವ ಕುಣಿಕೆಯಲ್ಲಿದ್ದನ್ನು ಕಂಡು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ರ್ಯಾಲಿಯಲ್ಲಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ಹಲವು ಪ್ರಮುಖ ಯೋಜನೆಗಳಿಗೆ ತಡೆ ಒಡ್ಡುವ ಮೂಲಕ ಅವರು ರಾಜ್ಯದ ಅಭಿವೃದ್ದಿಯಾಗದಂತೆ ಮಾಡುತ್ತಿದ್ದಾರೆ ಎಂದು ಮೋದಿ ಆರೋಪಿಸಿದ್ದರು. ಇದಕ್ಕೆ ಪ್ರತಿಯಾಗಿ ಮಮತಾ ಕೂಡಾ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದರು.