ಕೂಚ್ ಬಿಹಾರ್ , ಏ 04(MSP): ಪ್ರಧಾನಿ ಮೋದಿ ಒಬ್ಬ ಎಕ್ಸ್ಪೈರಿ ಬಾಬು ಎಂದು ಮೋದಿ ವಿರುದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಏ.4 ರ ಗುರುವಾರ ಪಶ್ಚಿಮ ಬಂಗಾಳದ ಕೂಚ್ ಬಿಹಾರ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಕೇಂದ್ರದ ಹಲವು ಪ್ರಮುಖ ಯೋಜನೆಗಳಿಗೆ ತಡೆ ಒಡ್ಡುವ ಮೂಲಕ ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ದೀದಿ ಸ್ಪೀಡ್ ಬ್ರೇಕರ್ ಎನ್ನುವ ಮೋದಿ ಮಾತಿಗೆ ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಅವರನ್ನು ‘ಎಕ್ಸ್ಪೈರಿ ಬಾಬು’ ಮತ್ತು ‘ಎಕ್ಸ್ಪೈರಿ ಪಿಎಂ’ ಎಂದು ವ್ಯಂಗ್ಯವಾಡಿರುವ ಮಮತಾ, ಪ್ರಧಾನಿ ನರೇಂದ್ರ ಮೋದಿಗೆ ಧೈರ್ಯವಿದ್ದರೆ ನನ್ನೊಂದಿಗೆ ನೇರವಾಗಿ ಮಾಧ್ಯಮದಲ್ಲಿ ಬಹಿರಂಗ ಚರ್ಚೆ ನಡೆಸಲು ಬರಲಿ ಎಂದು ಸವಾಲು ಹಾಕಿದರು.
ಎನ್ ಡಿ ಎ ಸರ್ಕಾರ ದ ಆಡಳಿತಾವಧಿಯಲ್ಲಿ ದೇಶಾದ್ಯಾಂತ ಸುಮಾರು 12,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ನನ್ನ ಆಡಳಿತದ ಅವದಿಯಲ್ಲಿ ರಾಜ್ಯದ ರೈತರ ಆದಾಯವನ್ನು ಮೂರು ಪಟ್ಟು ಏರಿಸಲಾಗಿದೆ. ನಾನು ಮೋದಿಯಂತೆ ಸುಳ್ಳು ಹೇಳುವುದಿಲ್ಲ ಎಂದು ಮೋದಿ ವಿರುದ್ದ ವಾಗ್ದಾಳಿ ನಡೆಸಿದರು.
ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ದೀದಿ ಸ್ಪೀಡ್ ಬ್ರೇಕರ್ ಆಗಿದ್ದಾರೆ ಎಂದು ತಮ್ಮ ಟೀಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಮೋದಿ ಎಕ್ಸ್ಪೈರಿ ಬಾಬು' ಎಂದು ತಿರುಗೇಟು ನೀಡಿದ್ದಾರೆ.