ಬೆಂಗಳೂರು, ಜು 27 (DaijiworldNews/MS): ಚಿತ್ರೀಕರಣ ಬಳಿಕ ಮೊಬೈಲ್ ಬದಲಾವಣೆ, ಮಧ್ಯಾಹ್ನ ನಂತರ ಮೊಬೈಲ್ ಎಕ್ಸ್ಚೇಂಜ್ ಆಗುತ್ತಿತ್ತು” ಎಂದು ವಿದ್ಯಾರ್ಥಿನಿಯರೇ ಬೀದಿಗಿಳಿದು ನ್ಯಾಯ ಕೇಳಬೇಕಾದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತಂದಿಟ್ಟಿದೆ ಎಂದು ಉಡುಪಿ ಘಟನೆ ಬಗ್ಗೆ ಬಿಜೆಪಿ ಕಿಡಿಕಾರಿದೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ.
ಈಗಾಗಲೇ ಮಹಿಳಾ ಮತದಾರರಿಗೆ ಸಾಕಷ್ಟು ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರ ಈಗ ನಮ್ಮ ಹೆಣ್ಣುಮಕ್ಕಳ ಗೌರವಕ್ಕೆ ಧಕ್ಕೆಯನ್ನುಂಟು ಮಾಡಿದೆ. ಜಿಹಾದಿ ಮನಸ್ಥಿತಿಯ ಪೋಷಣೆಗಾಗಿ ಯುವ ಮನಸ್ಸುಗಳನ್ನು ಕೆಡಿಸಿದೆ. ಮಹಿಳೆಯರ ಜೀವಕ್ಕೆ ರಕ್ಷಣೆಯಿಲ್ಲ, ಮಾನಕ್ಕೆ ಬೆಲೆಯಿಲ್ಲ ಎಂಬಂತಿದೆ ಕಾಂಗ್ರೆಸ್ ವರ್ತನೆ ಎಂದು ಕಿಡಿಕಾರಿದೆ.
ಚಿತ್ರೀಕರಣ ಬಳಿಕ ಮೊಬೈಲ್ ಬದಲಾವಣೆ, ಮಧ್ಯಾಹ್ನ ನಂತರ ಮೊಬೈಲ್ ಎಕ್ಸ್ಚೇಂಜ್ ಆಗುತ್ತಿತ್ತು” ಎಂದು ವಿದ್ಯಾರ್ಥಿನಿಯರೇ ಬೀದಿಗಿಳಿದು ನ್ಯಾಯ ಕೇಳಬೇಕಾದ ಪರಿಸ್ಥಿತಿಯನ್ನು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತಂದಿಟ್ಟಿದೆ.ಮುಚ್ಚಿಹಾಕಲು ಪ್ರಯತ್ನಿಸುತ್ತಿರುವ #UdupiHorror ಬಗ್ಗೆ ದಿನಗಳೆದಂತೆ ಆಘಾತಕಾರಿ ಮಾಹಿತಿ ಹೊರಬೀಳುತ್ತಿದೆ. ಇವೆಲ್ಲಾ ಮೊದಲೇ ಗೊತ್ತಿದ್ದ ಕಾರಣಕ್ಕೇ ಪ್ರಕರಣ ತಿರುಚಿ ಇದು ಮಕ್ಕಳಾಟವೆಂದು ಕಾಂಗ್ರೆಸ್ ಮುಚ್ಚಿಹಾಕಲು ಪ್ರಯತ್ನ ಪಟ್ಟಿತ್ತು. ಅದ್ಯಾವ ನಿಷೇಧಿತ ಸಂಘಟನೆ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರ ಸರ್ಕಾರ ಕಾಣದ ಕೈಗಳ ರಕ್ಷಣೆಗೆ ನಿಂತಿದ ಎಂದು ಪ್ರಶ್ನಿಸಿದೆ.
ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಫೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ತಾನ್ ಜಿಂದಾಬಾದ್ ಕೂಗುವವರು ಕಾಂಗ್ರೆಸ್ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ, ಇವೆಲ್ಲವೂ ಅವರ ಪಾಲಿಗೆ ಕೇವಲ ಮಕ್ಕಳಾಟವಷ್ಟೇ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಲ್ಲು ತೂರುವವರು, ಬೆಂಕಿ ಹಚ್ಚುವವರು, ಬಾಂಬ್ ಸ್ಫೋಟಿಸುವವರು, ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಿಸುವವರು, ದೇಶದ್ರೋಹದ ಕೃತ್ಯ ಎಸಗುವವರು, ಪಾಕಿಸ್ಥಾನ್ ಜಿಂದಾಬಾದ್ ಕೂಗುವವರು ಸಿದ್ದರಾಮಯ್ಯ ಅವರ ಸರ್ಕಾರದ ಕಣ್ಣಿಗೆ ಅಮಾಯಕರಂತೆ ಕಾಣುತ್ತಾರೆ. ಅವರೆಲ್ಲರೂ ಎಸಗುವ ದುಷ್ಕೃತ್ಯ ಕಾಂಗ್ರೆಸ್ನವರ ಪಾಲಿಗೆ ಕೇವಲ "ಮಕ್ಕಳಾಟ" ಎಂದು ವಾಗ್ದಾಳಿ ನಡೆಸಿದೆ.