ನವದೆಹಲಿ, ಜು 27 (DaijiworldNews/HR): ವಾರಣಾಸಿಯ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸರ್ವೆ ನಡೆಸುವ ಬಗ್ಗೆ ಅಲಹಾಬಾದ್ ಹೈಕೋರ್ಟ್ ತನ್ನ ಆದೇಶವನ್ನು ಆಗಸ್ಟ್ 3ಕ್ಕೆ ಕಾಯ್ದಿರಿಸಿದೆ.
ಜ್ಞಾನವಾಪಿ ಮಸೀದಿಯನ್ನು ದೇವಾಲಯದ ಮೇಲೆ ನಿರ್ಮಿಸಲಾಗಿದೆಯೇ ಎಂದು ನಿರ್ಧರಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ಸಮೀಕ್ಷೆ ನಡೆಸಲು ಆಗಸ್ಟ್ 3 ರವರೆಗೆ ತಡೆಹಿಡಿಯಲಾಗಿದೆ.
ಇನ್ನು ಸರ್ವೆಗೆ ತಡೆ ಹಿಡಿಯುವಂತೆ ಜ್ಞಾನವಾಪಿ ಸಮಿತಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪರಿಣಾಮ ಸರ್ವೋಚ್ಛ ನ್ಯಾಯಾಲಯವು ಸರ್ವೆಗೆ ತಾತ್ಕಾಲಿಕ ತಡೆ ನೀಡಿತ್ತು. ಇದರ ಬಳಿಕ ಮಸೀದಿ ಸಮಿತಿಯು ಜುಲೈ 25 ರಂದು ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು, ಕೆಳ ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಿತಿಗೆ ಸಮಯಾವಕಾಶ ನೀಡಿತ್ತು.