ಹೊಸದಿಲ್ಲಿ, ಎ05(SS): ನಮ್ಮ ದೇಶದ ಜನತೆ ಒಳ್ಳೆಯ ದಿನಗಳಿಗಾಗಿ ಕಾಯುತ್ತಿದ್ದರೆ, ಅವರು ಕಾವಲುಗಾರನೇ ಕಳ್ಳ ಎನ್ನುತ್ತಿದ್ದಾರೆ. ಇದು ಸಣ್ಣ ಕಳ್ಳತನವನಲ್ಲ. ನನ್ನನ್ನು ನಂಬಿ, ಚುನಾವಣೆ ಬಳಿಕ ಆ ಬಗ್ಗೆ ತನಿಖೆ ನಡೆಯಲಿದೆ. ಆ ಬಳಿಕ ಚೌಕಿದಾರ ಜೈಲಲ್ಲಿರುತ್ತಾನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕರ ಮನೆ ಎದುರು ಯಾರಾದಾರೂ ಚೌಕಿದಾರನನ್ನು ನೀವು ಕಂಡಿದ್ದೀರಾ...? ಇಲ್ಲ. ಅನಿಲ್ ಅಂಬಾನಿ ಮನೆ ಮುಂದೆ ಎಷ್ಟು ಮಂದಿ ಚೌಕಿದಾರರಿದ್ದಾರೆ..? ಅನಿಲ್ ಅಂಬಾನಿ ಬಳಿ ಸಾವಿರಾರು ಚೌಕಿದಾರರಿದ್ದಾರೆ. ಆ ಚೌಕಿದಾರರು ಆ ವ್ಯಕ್ತಿಗಾಗಿ ನಮ್ಮನ್ನು ಲೂಟಿ ಮಾಡಿದ್ದಾರೆ. ನಮ್ಮ ದೇಶದ ಜನತೆ ಒಳ್ಳೆಯ ದಿನಗಳಿಗಾಗಿ ಕಾಯುತ್ತಿದ್ದರೆ, ಅವರು ಕಾವಲುಗಾರನೇ ಕಳ್ಳ ಎನ್ನುತ್ತಿದ್ದಾರೆ. ಇದು ಸಣ್ಣ ಕಳ್ಳತನವನಲ್ಲ. ನನ್ನನ್ನು ನಂಬಿ, ಚುನಾವಣೆ ಬಳಿಕ ಆ ಬಗ್ಗೆ ತನಿಖೆ ನಡೆಯಲಿದೆ. ಆ ಬಳಿಕ ಚೌಕಿದಾರ ಜೈಲಲ್ಲಿರುತ್ತಾನೆ ಎಂದು ಹೇಳಿದರು.
ಚೌಕಿದಾರನಿಂದ ರಿಲಯನ್ಸ್ ಡಿಫೆನ್ಸ್ ಮಾಲೀಕ ಅನಿಲ್ ಅಂಬಾನಿಗೆ ಮಾತ್ರ ಲಾಭವಾಗಿದೆ. ಐದು ವರ್ಷಗಳ ಹಿಂದೆ ಇದ್ದ ಬಿಜೆಪಿ 'ಅಚ್ಛೇದಿನ್ ಆಯೇಂಗೆ' ಘೋಷಣೆ ಈಗ 'ಚೌಕಿದಾರ್ ಚೋರ್ ಹೈ' ಎಂದು ಬದಲಾಗಿದೆ ಎಂದು ವ್ಯಂಗ್ಯವಾಡಿದರು.