ಆಂಧ್ರಪ್ರದೇಶ,ಏ:ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆಯನ್ನು ಘೋಷಿಸಿದ್ದು, ಈ ಯೋಜನೆಯ ಹಿನ್ನಲೆ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ೫ ಲಕ್ಷ ರೂಪಾಯಿವರೆಗಿನ ಉಚಿತ ಆರೋಗ್ಯ ಸೇವೆಯ ಸೌಲಭ್ಯ ಲಭಿಸಲಿದೆ.
ಚಿತ್ತೂರು ಜಿಲ್ಲೆಯ ಕುಪ್ಪಮ್ನಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ರ್ಯಾಲಿಯೊಂದನ್ನು ಉದ್ದೇಶಿಸಿ ಈ ಕುರಿತು ಅವರು ಮಾತನಾಡಿದರು. ರಾಜ್ಯದಲ್ಲಿ ಇನ್ನೊಂದು ವಾರದಲ್ಲಿ ಮತದಾನ ನಡೆಯಲಿದ್ದು, ಅದಕ್ಕೂ ಮೊದಲು ಈ ಘೋಷಣೆ ಮಾಡಲಾಗಿದೆ. ಆರೋಗ್ಯ ಯೋಜನೆ ಅಡಿಯಲ್ಲಿ, ಯಾವುದೇ ವ್ಯಕ್ತಿಯು ವಾರ್ಷಿಕ 5ಲಕ್ಷ ವರೆಗಿನ ವೈದ್ಯಕೀಯ ಸೇವೆಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅವರು ತಿಳಿಸಿದರು. .
ಆರೋಗ್ಯ ಸಿರಿ ವೈಎಸ್ಆರ್ ದೃಷ್ಟಿಕೊನವಾಗಿದ್ದು, ಈ ಯುನಿವರ್ಸಲ್ ಹೆಲ್ತ್ ಕಾರ್ಡುಗಳು ರೂ. 1,000 ದಿಂದ ಯಾವುದೇ ವೈದ್ಯಕೀಯ ಖರ್ಚಿಗೆ ಲಭ್ಯವಿರಲಿದೆ. ಯುನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆ ವೈಯಕ್ತಿಕವಾಗಿ ಜಗನ್ ರೆಡ್ಡಿಯಿಂದ ಮೇಲ್ವಿಚಾರಣೆ ಮಾಡಲಾಗುವುದು ಎನ್ನಲಾಗಿದೆ.