ನವದೆಹಲಿ,ಏ07(AZM):ಈ ನೀಚ ಪಿತೃತ್ವಕ್ಕೆನೇ ಕಳಂಕ ತಂದವ. ತಂದೆ ಮಗಳ ಸಂಬಂಧ ಅನ್ನೋದು ಎಷ್ಟು ಪವಿತ್ರೆತೆಯುಳ್ಳದ್ದು. ಆದರೆ ಇಲ್ಲಿಯೊಬ್ಬ ನೀಚ ಪಿತೃತ್ವಕ್ಕೆನೇ ಕಳಂಕ ತಂದಿದ್ದಾನೆ. ಈತ ತನ್ನ ಮೂರರ ಹರೆಯದ ಮಗು ಹಸಿದು ಅಳುವಾಗ ಆ ಪುಟಾಣಿಯ ಬಾಯಿಗೆ ಮದ್ಯಸುರಿಯುತ್ತಿದ್ದಂತೆ.
ಇಂತಹ ಒಂದು ಹೃದಯ ವಿದ್ರಾವಕ ಘಟನೆ ನಡೆದಿರುವುದು ರಾಜಧಾನಿ ನಗರ ದೆಹಲಿಯಲ್ಲಿ. ಆ ಮಗುವಿಗೆ ಒಂದು ಡೈಪರ್ ಹಾಕಿದ್ದು, ಎಷ್ಟೋ ದಿನಗಳಿಂದ ಅದರಲ್ಲಿ ಆ ಮಗು ಮಲ ಮೂತ್ರ ಮಾಡಿ ದುರ್ವಾಸನೆಯಿಂದ ಜೀವನ ಕಳೆಯುತ್ತಿತ್ತು. ಹೌದು ಎಷ್ಟೋ ದಿನಗಳಿಂದ ಆ ಪುಟ್ಟ ಜೀವ ಮಲಮೂತ್ರದ ನಡುವೆಯೇ ಹಸಿವಿನಿಂದ ನರಳುತ್ತಿತ್ತು. ಕೊನೆಗೂ ಹಸಿದು ಜೋರಾಗಿ ಅಳುವ ಆ ಮಗುವಿನ ಬಾಯಿಗೆ ಆ ಪೈಶಾಚಿಕ ತಂದೆ ಎಷ್ಟೋ ದಿನದಿಂದ ಹಾಲು ಆಹಾರವನ್ನು ನೀಡದೆ ಮದ್ಯವನ್ನು ಸುರಿಯುತ್ತಿದ್ದ ಎಂದು ಅಲ್ಲಿನ ಸ್ಥಳೀಯರು ದೂರಿದ್ದಾರೆ.
ಕೊನೆಗೂ ಈ ಮಗುವಿನ ಈ ನೋವನ್ನು ಕಾಣಲಾಗದ ಸ್ಥಳೀಯ ಜನರು ಸಹಾಯವಾಣಿ ೧೮೧ಗೆ ಕರೆ ಮಾಡಿ ಆ ಮಗುವನ್ನು ದೆಹಲಿ ಮಹಿಳಾ ಆಯೋಗಕ್ಕೆ ಒಪ್ಪಿಸಿದೆ. ಮಲಮೂತ್ರದ ನಡುವೆಯೇ ಎಷ್ಟೋ ದಿನದಿಂದ ತನ್ನ ಜೀವನ ಕಳಿಯುತ್ತಿದ್ದ ಆ ಪುಟಾಣಿ ಹಲವು ಸೋಂಕುಗಳಿಂದ ಬಳಲುತ್ತಿದ್ದು ಇದೀಗ ಆ ಮಗುವನ್ನು ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.