ಅಸ್ಸಾಂ, ಎ10(SS): ಚೌಕೀದಾರ ಕೇವಲ ಕಳ್ಳನಲ್ಲ, ಹೇಡಿಯೂ ಹೌದು ಎಂದು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿಯನ್ನು ನಡೆಸಿದ್ದಾರೆ.
ಚೌಕೀದಾರ ಕಳ್ಳ ಮಾತ್ರ ಅಲ್ಲ ಹೇಡಿ ಕೂಡಾ ಹೌದು. ಕಳೆದ 5 ವರ್ಷಗಳಲ್ಲಿ ಮೋದಿ ಯೋಜನೆಗಳು ಶ್ರೀಮಂತ ಉದ್ಯಮಿಗಳಾದ ಅನಿಲ್ ಅಂಬಾನಿ, ಮೆಹುಲ್ ಚೊಕ್ಸಿ, ನೀರವ್ ಮೋದಿಗೆ ಸಹಕಾರಿಯಾಗಿದೆ. ಮೋದಿ ವಿರೋಧ ಪಕ್ಷದ ನಾಯಕನೊಂದಿಗೆ ನೇರವಾಗಿ ಚರ್ಚೆಗೆ ಬರುವುದರಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಕೇವಲ 15 ಜನಕ್ಕೆ ಅನುಕೂಲ ಮಾಡಿಕೊಡಲು ಮೋದಿ 5 ವರ್ಷ ಸರ್ಕಾರ ನಡೆಸಿದ್ದಾರೆ. ಒಂದು ವೇಳೆ 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇವಲ ಬಡವರಿಗೆ ಹಣ ನೀಡುವುದು ಮಾತ್ರ ಸುದ್ದಿಯಾಗಲಿದೆ ಎಂದು ಹೇಳಿದ್ದಾರೆ.
ಚೌಕೀದಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದ್ದರಿಂದ ನಾನು ನನ್ನೊಂದಿಗೆ ಚರ್ಚೆಗೆ ಆಹ್ವಾನಿಸಿದ್ದೆ. ಆದರೆ ಧೈರ್ಯ ಇಲ್ಲದೇ ತಪ್ಪಿಸಿಕೊಂಡರು ಎಂದು ಹೇಳಿದ್ದಾರೆ.