ಕಲಬುರಗಿ, ಆ 30 (DaijiworldNews/SM): ಕಲಬುರಗಿ ಮಹಾನಗರ ಪಾಲಿಕೆಯು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವರು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರಿಗೆ ಬುಧವಾರ ದಂಡ ವಿಧಿಸಿದೆ.
ಯಾವುದೇ ಅನುಮತಿ ಪಡೆಯದೇ ನಗರದ ಆಳಂದ ಚೆಕ್ ಪೋಸ್ಟ್ ಬಳಿ ಗೃಹ ಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮದ ಬ್ಯಾನರ್ ಹಾಕಿದ್ದ ಹಿನ್ನೆಲೆ ಪಾಲಿಕೆಯು ಘನ ತ್ಯಾಜ್ಯ ನಿರ್ವಣೆಯಡಿಯಲ್ಲಿ ಸಚಿವರಿಗೆ ರೂ. 5,000 ದಂಡ ವಿಧಿಸಿದೆ. ಸಚಿವರ ಗಮನಕ್ಕೆ ಈ ವಿಚಾರ ಬಂದಿದ್ದು, ಪಾಲಿಕೆಯ ಕ್ರಮವನ್ನು ಬೆಂಬಲಿಸಿ ದಂಡದ ಮೊತ್ತವನ್ನು ಪಾವತಿಸಲು ಅವರು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.