ಕಾಸರಗೋಡು, ಸೆ 01 (DaijiworldNews/MS): ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಿಗೆ ಮಲಯಾಳ ಶಿಕ್ಷಕರರ ನೇಮಕ ವಿರುದ್ಧ ಹೋರಾಟಗಳು ನಡೆಯುತ್ತಿರುವ ನಡುವೆಯೇ ಕನ್ನಡ ಶಿಕ್ಷಕರ ನೇಮಕ ವಿಚಾರದಲ್ಲಿಯೂ ಕನ್ನಡಿಗರಿಗೆ ಕೇರಳದಿಂದ ಅನ್ಯಾಯವಾಗಿರುವುದಾಗಿ ವರದಿಯಾಗಿದೆ.
ಕೇರಳ ಲೋಕಸೇವಾ ಆಯೋಗ ಜೂ.9ರಂದು ನಡೆಸಿದ್ದ ಕನ್ನಡ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದ ಬಹುತೇಕ ಕನ್ನಡ ಅಭ್ಯರ್ಥಿಗಳು ಅನರ್ಹರಾಗಿದ್ದಾರೆ. ಆಯೋಗದ ಪ್ರಶ್ನೆ ಪತ್ರಿಕೆಯಲ್ಲೇ ದೋಷ ಇದ್ದದ್ದು ಇದಕ್ಕೆ ಕಾರಣವಾಗಿದೆ.
ಆಯೋಗ ರಚಿಸಿದ ಪ್ರಶ್ನೆಪತ್ರಿಕೆಯಲ್ಲಿ ಸರಣಿ ತಪ್ಪುಗಳಿರುವುದರಿಂದ ಪ್ರಶ್ನೆಗಳನ್ನೇ ಕೈ ಬಿಟ್ಟಿರುವುದು ಮತ್ತು ತಪ್ಪು ಉತ್ತರಗಳಿಗೆ ಅಂಕ ಕಡಿತಗೊಳಿಸಿರುವುದು ಇದೆಲ್ಲದಕ್ಕೂ ಕಾರಣವಾಗಿದೆ.