ತೆಲಂಗಾಣ,ಏ10(AZM):ಮಣ್ಣು ಕುಸಿತದಿಂದ 11 ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ತೆಲಂಗಾಣದ ನಾರಾಯಣ್ಪೆಟ್ ಜಿಲ್ಲೆಯ ಟಿಲೆರು ಗ್ರಾಮದಲ್ಲಿ ಇಂದು ನಡೆದಿದೆ.
ಟಿಲೆರು ಗ್ರಾಮದಲ್ಲಿ ಮನಗ್ರಾ ಯೋಜನೆಯಡಿ ಮಳೆ ನೀರು ಇಂಗಿಸಲು ಎಂದು ಗುಂಡಿಯನ್ನು ತೋಡಲಾಗುತ್ತಿತ್ತು. ಈ ವೇಳೆ ಏಕಾಏಕಿಯಾಗಿ ಮಣ್ಣು ಕುಸಿತ ಉಂಟಾಗಿ 11 ಮಂದಿ ಮಹಿಳಾ ಕಾರ್ಮಿಕರು ಮೃತಪಟ್ಟಿದ್ದಾರೆ.
ಒಟ್ಟು 12 ಮಹಿಳಾ ಕಾರ್ಮಿಕರು ಗುಂಡಿ ತೋಡುವ ಕಾರ್ಯದಲ್ಲಿ ತೊಡಗಿದ್ದು, ಈ ಪೈಕಿ 11 ಮಂದಿ ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದು, ಓರ್ವಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.