ಶಿವಮೊಗ್ಗ, ಸೆ 10 (DaijiworldNews/HR): ಶಿವಮೊಗ್ಗದಲ್ಲಿ ಯುವತಿಯೊಬ್ಬಳು ಹೊಸ ಜೀವನಕ್ಕೆ ಕಾಲಿಟ್ಟ ದಿನವೇ ಪರೀಕ್ಷೆಗೆ ಹಾಜರಾಗಿರುವ ಘಟನೆ ನಡೆದಿದೆ.
ಶಿವಮೊಗ್ಗದ ಭರ್ಮಪ್ಪ ನಗರದ ಸತ್ಯವತಿ ಹಾಗೂ ಖಾಸಗಿ ಕಂಪನಿ ಉದ್ಯೋಗಿ ಚೆನ್ನೈ ಮೂಲದ ಫ್ರಾನ್ಸಿಸ್ಗೆ ಕಳೆದ ಎರಡು ವರ್ಷದ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಪ್ರೀತಿಸಿ ಹಿರಿಯರನ್ನು ಒಪ್ಪಿಸಿ ಇಂದು ಮನೆಯಲ್ಲಿಯೇ ಸರಳವಾಗಿ ವಿವಾಹವಾಗಿದ್ದಾರೆ.
ಸತ್ಯವತಿ ಪದವಿ ಕಾಲೇಜುವೊಂದರಲ್ಲಿ ಅಂತಿಮ ವರ್ಷದ ಬಿಎ ಪದವಿ ವ್ಯಾಸಂಗ ಮಾಡುತ್ತಿದ್ದು, ಇಂದು ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಇತ್ತು. ಹೀಗಾಗಿ ಭಾನುವಾರ ಮುಂಜಾನೆ ತಾಳಿ ಕಟ್ಟಿಸಿಕೊಂಡ ಸತ್ಯವತಿ ಪರೀಕ್ಷೆಗೆ ಹಾಜರಾಗಿದ್ದಾರೆ.
ಇನ್ನು ಪರೀಕ್ಷೆ ನಂತರ ನವವಧು ಮತ್ತೆ ಮದುವೆ ಮಂಟಪಕ್ಕೆ ತೆರಳಿ, ಮುಂದಿನ ಧಾರ್ಮಿಕ ವಿಧಿವಿಧಾನ ನೆರವೇರಲಿದ್ದಾರೆ ಎನ್ನಲಾಗಿದೆ.