ಶಿವಮೊಗ್ಗ, ಸೆ 12 (DaijiworldNews/AK): ಚಾಲನಾ ಪರವನಿಗೆ ಇಲ್ಲದೆ ಒಮಿನಿ ವಾಹನ ಚಲಾಯಿಸುತ್ತಿದ್ದಬಾಲಕನ ತಂದೆಗೆ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ 25 ಸಾವಿರ ದಂಡ ವಿಧಿಸಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ನಿವಾಸಿ ಇಲಿಯಾಸ್ (41) ದಂಡ ಪಾವತಿಸಬೇಕಾದ ವ್ಯಕ್ತಿ. ಸೆ.9ರಂದು ಇಲಿಯಾಸ್ ನ 17 ವರ್ಷದ ಮಗ ನಗರದಲ್ಲಿ ಒಮಿನಿ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಕರ್ನಾಟಕ ಸಂಘದ ಬಳಿಯ ಬಿ.ಎಚ್.ರಸ್ತೆಯಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಎಚ್.ಎಸ್.ಶಿವಣ್ಣನವರ್ ವಾಹನ ತಪಾಸಣೆ ವೇಳೆ ಒಮಿನಿ ವಾಹನವನ್ನು ಪರವಾನಗಿ ಇಲ್ಲದೇ ಬಾಲಕ ಓಡಿಸಿ ನಿಯಮ ಉಲ್ಲಂಘನೆ ಮಾಡಿರುವುದು ಕಂಡು ಬಂದಿದೆ.
ಹೀಗಾಗಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿಕೊಳ್ಳಲಾಯಿತು. ಚಾಲನೆಗೆ ಅರ್ಹತೆ ಹೊಂದಿರದ ಮಗನಿಗೆ ವಾಹನ ನೀಡಿದ್ದ ತಂದೆಯ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ದೋಷಾರೋಪ ವರದಿ ಸಲ್ಲಿಸಿದ್ದರು. ಇದೀಗ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.